ಬೆಂಗಳೂರು: ‘ಯಕ್ಷಗಾನ ಕಲಾವಿದರ ಬದುಕಿನ ಮೇಲಿನ ಕಳಕಳಿಯಿಂದ ಈ ಮಾತು ಹೇಳಿದ್ದೇ ಹೊರತು, ಅವರನ್ನು ಅವಮಾನಿಸುವ ಉದ್ದೇಶ ನನಗಿಲ್ಲ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಹೇಳಿದರು.

‘ಯಕ್ಷಗಾನ ಕಲಾವಿದರ ಸ್ಥಿತಿಯ ಬಗ್ಗೆ ನಾನು ಆಡಿದ ಮಾತಿಗೆ ಬದ್ಧನಾಗಿದ್ದೇನೆ. ಯಕ್ಷಗಾನ ಕ್ಷೇತ್ರದ ಪರಿಣಿತರು ಈ ಬಗ್ಗೆ ಪ್ರಶ್ನಿಸಿದರೆ, ಉತ್ತರಿಸಲು ನಾನು ಸಿದ್ಧನಿದ್ದೇನೆ. ಆದರೆ ನಿನ್ನೆಯಿಂದ ಹಲವು ಕಲಾವಿದರು ನನಗೆ ಕರೆ ಮಾಡಿ, ‘ನೀವು ಹೇಳಿದ್ದು ಸತ್ಯ’ ಎಂದು ನನ್ನ ಮಾತನ್ನು ಸ್ವಾಗತಿಸಿದ್ದಾರೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಳಿಮಲೆ ಏನು ಹೇಳಿದ್ದರು?:

‘ಯಕ್ಷಗಾನದ ಒಳಗೆ ಎಷ್ಟೋ ಬಾರಿ ಹೋಮೊಸೆಕ್ಸ್ (ಸಲಿಂಗಕಾಮ) ಬೆಳಿತದೆ’ ಎಂದು ಮೈಸೂರಿನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮವೊಂದರಲ್ಲಿ ಬಿಳಿಮಲೆ ಹೇಳಿದ್ದರು.

‘ಯಕ್ಷಗಾನದ ಮೇಳದ ಸಲುವಾಗಿ ಆರು ತಿಂಗಳ ಕಾಲ ಮನೆಯಿಂದ ದೂರ ಇರುವ ಕಲಾವಿದರ ಕಾಮ ಹೆಂಗಿರುತ್ತದೆ? ಯಕ್ಷಗಾನದ ಒಳಗಡೆ ಅದು ಅನಿವಾರ್ಯ ಮತ್ತು ಸ್ತ್ರೀ ವೇಷಧಾರಿಗಳಿಗೆ ಹೆಚ್ಚು ಒತ್ತಡವಿರುತ್ತದೆ’ ಎಂದಿದ್ದರು.
.ಯಕ್ಷಗಾನದ ಒಳಗೆ ಸಲಿಂಗಕಾಮ: ಪುರುಷೋತ್ತಮ ಬಿಳಿಮಲೆ.ಯಕ್ಷಗಾನದೊಳಗೆ ಎಷ್ಟೋ ಬಾರಿ ಹೋಮೊಸೆಕ್ಸ್ ಬೆಳೀತದೆ: ಪುರುಷೋತ್ತಮ ಬಿಳಿಮಲೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.