ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದಾಪುರದ ಶ್ರೀಹರಿಗೆ ಜಪಾನ್‌ನ ಉನ್ನತ ಪ್ರಶಸ್ತಿ

Published : 21 ಜೂನ್ 2017, 19:30 IST
ಫಾಲೋ ಮಾಡಿ
Comments

ಬೆಂಗಳೂರು: ಭಾರತದ ಕೃಷಿ ವಿಜ್ಞಾನಿ ಶ್ರೀಹರಿ ಪ್ರಕಾಶ ಚಂದ್ರಘಟಗಿ ಅವರಿಗೆ ಜಪಾನ್‌ ಸರ್ಕಾರ, 2017ನೇ ಸಾಲಿನ ಪರಿಸರ ಸಚಿವಾಲಯದ ಪ್ರಶಸ್ತಿ ನೀಡಿ ಗೌರವಿಸಿದೆ. ಪರಿಸರದ ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರಗಳನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ಅವರಿಗೆ ಈ ಗೌರವ ಸಂದಿದೆ.

ಪರಿಸರ ಕ್ಷೇತ್ರದ ಸಾಧನೆಗಾಗಿ ಜಪಾನ್‌ ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿ ಇದು. ಜತೆಗೆ ಶ್ರೀಹರಿ ಅವರು ಈ ಪ್ರಶಸ್ತಿ ಪಡೆದ ಮೊದಲ ವಿದೇಶಿ ಪ್ರಜೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

‘ಸುಮಾರು 20 ವರ್ಷಗಳಿಂದ ಜಪಾನ್‌ನಲ್ಲಿ ನೆಲೆಸಿರುವ ಅವರು, ಇಕೊಸೈಕಲ್ ಕಾರ್ಪೊರೇಷನ್ ಎಂಬ ಕಂಪೆನಿಯ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದಾರೆ. ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ 12 ತಂತ್ರಜ್ಞಾನಗಳ ಮೇಲೆ ಅವರು ಹಕ್ಕು ಸ್ವಾಮ್ಯ ಹೊಂದಿದ್ದಾರೆ. ಈ ತಂತ್ರಜ್ಞಾನಗಳನ್ನು ಜಪಾನ್, ತೈವಾನ್, ಥಾಯ್ಲೆಂಡ್, ಚೀನಾ, ಅಮೆರಿಕ ಮತ್ತು ಭಾರತದ 400 ಸ್ಥಳಗಳಲ್ಲಿ ಅಳವಡಿಸಿಕೊಳ್ಳಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಶ್ರೀಹರಿ ಪ್ರಕಾಶ ಚಂದ್ರಘಟಗಿ ಅವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT