ಫ್ರೈಡ್ರಿಕ್ಶಾಫೆನ್: ಯುರೋಪಿನ ಬೋಡೆನ್ಸೀ ಸರೋವರ ದಡದಲ್ಲಿ ಅಲ್ಲಿನ ಕನ್ನಡ ಮನಸ್ಸುಗಳು ಸೇರಿ ಮೊದಲ ಬಾರಿಗೆ ಕನ್ನಡ ರಾಜ್ಯೋತ್ಸವ ಆಚರಿಸದಿದ್ದಾರೆ. ಆ ಮೂಲಕ ದೂರದಲ್ಲಿದ್ದರೂ ತಮ್ಮ ಕನ್ನಡ ಪ್ರೀತಿಯನ್ನು ಮರೆದಿದ್ದಾರೆ.

ನವೆಂಬರ್ 22ರಂದು ಫ್ರೈಡ್ರಿಕ್ಶಾಫೆನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನೇಕರು ಭಾಗವಹಿಸಿದ್ದು, ಕನ್ನಡ ನಾಡಗೀತೆಯನ್ನು ಒಂದಾಗಿ ಹಾಡಿದ್ದಾರೆ. ಪುಟ್ಟ ಮಕ್ಕಳ ಬಾಯಿಂದ ಕನ್ನಡ ಗೀತೆಗಳು ಹೊರಬಂದವು. ಕೆಲವರು ಕವನ ವಾಚಿಸಿದರೆ, ಇನ್ನು ಕೆಲವರು ಕನ್ನಡ ಪ್ರಸಿದ್ಧ ಗೀತೆಗಳನ್ನು ಹಾಡಿದ್ದಾರೆ.

ಊಟದ ಬಳಿಕ ಕನ್ನಡಕ್ಕೆ ಸಂಬಂಧಿಸಿದಂತೆ ಆಟಗಳನ್ನು ಆಯೋಜಿಸಿದ್ದು, ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರೆಗೂ ಎಲ್ಲರೂ ಪ್ರೀತಿಯಿಂದ ಪಾಲ್ಗೊಂಡಿದ್ದಾರೆ. ಕೊನೆಯಲ್ಲಿ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡನ್ನು ಎಲ್ಲರೂ ಸೇರಿ ಒಂದೇ ಸ್ವರದಲ್ಲಿ ಹಾಡಿದ್ದಾರೆ.

ಕಾರ್ಯಕ್ರಮದಲ್ಲಿ ವಿನುತಾ, ಶ್ವೇತಾ, ದಿವ್ಯ, ಮಲತೇಶ್, ರಂಜಿತ, ಅನುಶ, ವಿನಾಯಕ, ಅಥರ್ವ, ಕೈರಾ, ರಿಧಾನ್, ಜಶ್ವಿನ್, ಶಿವ ಹಲವರು ಭಾಗಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.