ಮಿಚಿಗನ್ (ಅಮೆರಿಕ): ಮಿಚಿಗನ್ ರಾಜ್ಯದಲ್ಲಿರುವ ಕನ್ನಡಿಗರು ಇಲ್ಲಿನ ಭಾರತೀಯ ದೇವಸ್ಥಾನದಲ್ಲಿ ಇತ್ತೀಚೆಗೆ (ಆ. 24) ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿದರು.

ನಾಲ್ಕು ವರ್ಷಗಳ ಹಿಂದೆ ನಗರಿ ಶ್ರೀರಂಗ ಆಚಾರ್ ಅವರು ಜನ್ಮಾಷ್ಟಮಿ ಆಚರಣೆ ಆರಂಭಿಸಿದರು. ಅವರ ಕಾಲಾನಂತರವೂ ಆ ಪರಂಪರೆ ಮುಂದುವರಿದಿದೆ. ಆಯೋಜಕರೇ ಸೇರಿ ಪ್ರಸಾದ ತಯಾರಿಸಿ ಸುಮಾರು ಸಾವಿರ ಜನರಿಗೆ ಉಣಬಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯಕ್ರಮದ ಮುಖ್ಯ ಸಂಯೋಜಕರಲ್ಲಿ ಒಬ್ಬರಾದ ವೆಂಕಟೇಶ್ ಹರನಹಳ್ಳಿ, ‘ಇಂಥ ಕಾರ್ಯಕ್ರಮಗಳನ್ನು ನಾವು ದೇವಸ್ಥಾನದಲ್ಲಿ ಆಯೋಜಿಸುವುದರಿಂದ ನಮ್ಮ ಧಾರ್ಮಿಕ, ಸಾಂಸ್ಕೃತಿಕ ಕಲೆಗಳ ಮಾಹಿತಿಯನ್ನು ಮುಂದಿನ ಜನಾಂಗಕ್ಕೆ ನೀಡಿದಂತಾಗಲಿದೆ. ಜತೆಗೆ ಅವರಲ್ಲಿ ಆಸಕ್ತಿ ಮೂಡಿಸಿದಂತೆಯೂ ಆಗಲಿದೆ’ ಎಂದರು.

ಮಕ್ಕಳು ಹಾಗೂ ಮಹಿಳೆಯರು ಸೇರಿ ಕೃಷ್ಣನ ಭಜನೆ, ಮಿಚಿಗನ್ನ ಭರತನಾಟ್ಯ ಶಿಕ್ಷಕರ ನೇತೃತ್ವದಲ್ಲಿ ‘ಶ್ರೀ ಕೃಷ್ಣ ಲೀಲಾ’ ಎಂಬ ನೃತ್ಯರೂಪಕ ಸೊಗಸಾಗಿ ಮೂಡಿಬಂತು. ಕರ್ನಾಟಕದ ಗಂಡುಕಲೆ ಎಂದೇ ಪ್ರಸಿದ್ಧವಾಗಿರುವ ಯಕ್ಷಗಾನದಲ್ಲಿ ‘ಸುಭದ್ರಾ ಕಲ್ಯಾಣ’ ಪ್ರಸಂಗವನ್ನು ಯಕ್ಷಹೆಜ್ಜೆಯ ಗುರುಗಳಾದ ಡಾ. ರಾಜೇಂದ್ರ ಕೆದ್ಲಾಯ ಅವರ ಸಾರಥ್ಯದಲ್ಲಿ ಪ್ರಸ್ತುಪಡಿಸಲಾಯಿತು. ಇದಕ್ಕೆ ಮಿಚಿಗನ್ ಯಕ್ಷಗಾನ ಸಂಘದ ಸಹಕಾರವಿತ್ತು.

ಈ ಸಂದರ್ಭದಲ್ಲಿ ವೆಂಕಟೇಶ್ ಹರನಹಳ್ಳಿ, ಬಸ್ಸಯ್ಯ ಕಲಾಲ್, ಮೋಹನ್ ಪ್ರಭಾಕರ್, ರವೀಶ್ ಚಂದ್ರಶೇಖರ್, ಧನ್ಯವಾಣಿ ರಾವ್, ಪ್ರಶಾಂತ್ ಕಟ್ಟಿ, ಮೇಧಿನಿ ಕಟ್ಟಿ, ಸಂಧ್ಯಾ ನಗರಿ ಆಚಾರ್, ನಾಗ ಬತಾಲ, ರಾಘವೇಂದ್ರ ಕುಲಕರ್ಣಿ, ಸೀತಾರಾಮ್ ಐತಾಳ್, ಗೀತಾ ಮೋಹನ್, ಶ್ರೀಕಲಾ ರಾಕೇಶರಾಮ್, ರಾಕೇಶ್, ಪಲ್ಲವಿ ರಾವ್, ಶಕುಂತಲಾ ಕಲಾಲ್, ಶೈಲಾ, ಅನಿಲ್ ಭಟ್, ಪೂರ್ಣಿಮಾ ಅರ್ಜುನ್, ಸ್ವಾತಿ, ಮನೋಜ್, ರಮೇಶ್, ವೆಂಕಟೇಶ್ ಪೊಳಲಿ, ಸುಚಿತ್ರ, ಗುರುರಾಜ್, ಶ್ರೀರಂಗ, ಆದಿತ್ಯ, ಲೀಲಾ ಎಸ್. ಪಾಪರೆಡ್ಡಿ, ವಿವೇಕ್ ರೆಡ್ಡಿ, ಧ್ರುವ, ನವೀನ , ಶ್ರೀಶ ರಾವ್, ರಿತ್ವಿಕ್, ಅನಂತ್, ರವಿ ಸೀತಾರಾಮ್, ವೀರಣ್ಣ , ಅಂಕಿತ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.