ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್‌– ಗಾಜಾ ಯುದ್ಧಕ್ಕೆ 6 ತಿಂಗಳು: ಇಲ್ಲಿವರೆಗೆ 33,175 ಮಂದಿ ಸಾವು

Published 7 ಏಪ್ರಿಲ್ 2024, 11:08 IST
Last Updated 7 ಏಪ್ರಿಲ್ 2024, 11:08 IST
ಅಕ್ಷರ ಗಾತ್ರ

ಜೆರುಸಲೇಂ: ಇಸ್ರೇಲ್‌–ಗಾಜಾ ನಡುವೆ ನಡೆಯುತ್ತಿರುವ ಯುದ್ಧ ಪ್ರಾರಂಭವಾಗಿ ಭಾನುವಾರಕ್ಕೆ ಸರಿಯಾಗಿ ಆರು ತಿಂಗಳು ಕಳೆದಿದೆ.

‘2023ರ ಅಕ್ಟೋಬರ್‌ 7ರಂದು ಗಾಜಾದ ಹಮಾಸ್‌ ಬಂಡುಕೋರರ ವಿರುದ್ಧ ಯುದ್ಧ ಮಾಡಲು ಇಸ್ರೇಲ್‌ ಪ್ರಾರಂಭಿಸಿತು. ಇಲ್ಲಿಯವರೆಗೂ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 33,175 ಮಂದಿ ಸಾವಿಗೀಡಾಗಿದ್ದಾರೆ. 75,886 ಜನರು ಗಾಯಗೊಂಡಿದ್ದಾರೆ’ ಎಂದು ಹಮಾಸ್‌ ನಿಯಂತ್ರಣದಲ್ಲಿರುವ ಗಾಜಾದ ಆರೋಗ್ಯ ಸಚಿವಾಲಯ ಭಾನುವಾರ ಹೇಳಿದೆ.

ಇಲ್ಲಿಯವರೆಗೂ ಗಾಜಾದ 32 ಸಾವಿರ ಜನರು ನಮ್ಮಿಂದ ಹತರಾಗಿದ್ದಾರೆ ಎಂದು ಇಸ್ರೇಲ್‌ ಕೂಡ ಹೇಳಿದೆ.

ಹಮಾಸ್‌ ಬಂಡುಕೋರರು ಅನಿರೀಕ್ಷಿತ ದಾಳಿ ನಡೆಸಿ ವಿದೇಶಿ ಪ್ರಜೆಗಳು ಸೇರಿದಂತೆ ಇಸ್ರೇಲ್‌ನ 1,170 ಜನರನ್ನು ಕೊಂದಿದ್ದರು. ಇದರಿಂದಾಗಿ ಉಭಯ ದೇಶಗಳ ನಡುವೆ ಯುದ್ಧ ಪ್ರಾರಂಭವಾಯಿತು.

ತನ್ನ ಎಷ್ಟು ಮಂದಿ ಸದಸ್ಯರು ಹತರಾಗಿದ್ದಾರೆ ಎಂಬ ಮಾಹಿತಿ ನೀಡಲು ಇಸ್ರೇಲ್‌ ನಿರಾಕರಿಸಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT