ಲಂಡನ್: ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿಮನೆಯಲ್ಲಿಯೇಐಸೋಲೇಷನ್‌ನಲ್ಲಿರುವ 92 ಹರೆಯದ ವ್ಯಕ್ತಿಯೊಬ್ಬರು ಹಾಡಿರುವ ಹಾಡು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಬ್ರಿಟನ್‌ನ ಬರ್ಮಿಂಗ್ಯ್ಹಾಮ್ ನಿವಾಸಿ ಆರ್ಥರ್ ಕುಕ್ ಎಂಬ ಈ ವ್ಯಕ್ತಿ ಮನೆಯಲ್ಲಿಯೇ ಕುಳಿತು ಹಾಡುತ್ತಿರುವ ವಿಡಿಯೊ ಇದಾಗಿದೆ.

ಬರ್ಮಿಂಗ್ಯ್ಹಾಮ್ ಲೈವ್ ಮಾಧ್ಯಮದ ಪ್ರಕಾರ ಆರ್ಥರ್ ಕುಕ್ ಅವರ ಮಗಳು ಕರೋಲ್ ಆನ್ ಸ್ಮಿತ್ ಈ ವಿಡಿಯೊ ಚಿತ್ರೀಕರಿಸಿ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಅಪ್‌ಲೋಡ್ ಮಾಡಿದ ಕೆಲವೇ ಹೊತ್ತಿನಲ್ಲಿ ಇದು ವೈರಲ್ ಆಗಿದೆ.

ಹಾಡುವುದು ನಮ್ಮಪ್ಪನ ಆಸಕ್ತಿ, ಅವರಿಗೆ ಅದು ಇಷ್ಟ. ಸೋಷ್ಯಲ್ ಡಿಸ್ಟೆನ್ಸಿಂಗ್ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿರುವ ಅವರು ಸಾಧ್ಯವಾದಾಗಲೆಲ್ಲಾ ಹಾಡುತ್ತಲೇ ಇರುತ್ತಾರೆ. ನಾರ್ಥ್‌ಫೀಲ್ಡ್‌ನಲ್ಲಿರುವ ಅಂಗಡಿಗಳಿಗೆ ಪ್ರತಿ ದಿನ ಭೇಟಿ ನೀಡುವ ಇವರನ್ನು ಜನರು 'ಸಿಂಗಿಂಗ್ ಮ್ಯಾನ್' ಎಂದೇ ಕರೆಯುತ್ತಾರೆ ಎಂದು ಎಂದು ಕರೋಲ್ ಅನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.