ನವದೆಹಲಿ: ಒಂದು ವರ್ಷದಿಂದ ಭೂಪ್ರದಕ್ಷಿಣೆ ಹಾಕಿದ ಫ್ರೆಂಚ್ ವೈನ್ ಬಾಟಲಿ ಮಾರಾಟಕ್ಕಿಡಲಾಗಿದ್ದು, ₹7.39 ಕೋಟಿಬೆಲೆ ನಿಗದಿಪಡಿಸಲಾಗಿದೆ.

'ಪ್ರೆಟಸ್ 2000' ಎಂಬ ಹೆಸರಿನ ವೈನ್ ಇದಾಗಿದ್ದು, ಬೋರ್ಡೆಕ್ಸ್ ಪ್ರದೇಶದ ಮೆರ್ಲಾಟ್ ದ್ರಾಕ್ಷಿಯಿಂದ ತಯಾರಿಸಲಾಗಿದೆ.

ಆಹಾರ ಹಾಗೂ ಕೃಷಿಯ ಕುರಿತು ಖಾಸಗಿ ಅನುದಾನಿತ ಸಂಶೋಧನೆ ಹಾಗೂ ಅಧ್ಯಯನದ ಭಾಗವಾಗಿ ಈ ಫ್ರೆಂಚ್ ವೈನ್, 14 ತಿಂಗಳು ಕಕ್ಷೆಯಲ್ಲಿ ಕಾಲ ಕಳೆದಿದೆ.

ಇದನ್ನೂ ಓದಿ:ಮೆಕ್ಸಿಕೊ: ಮೆಟ್ರೊ ಮೇಲ್ಸೇತುವೆ ಕುಸಿದು 23 ಜನರ ಸಾವು

ಮಂಗಳವಾರದಂದು ಫ್ರೆಂಚ್ ವೈನ್ ಬಾಟಲಿಯನ್ನು ಕ್ರಿಸ್ಟೀಸ್ ಹರಾಜಿಗೆ ಇರಿಸಿದ್ದು, ಅಂದಾಜು ₹7.39 ಕೋಟಿ ಬೆಲೆ ನಿಗದಿಪಡಿಸಲಾಗಿದೆ.

2019 ನವೆಂಬರ್‌ನಲ್ಲಿ ಸ್ಪೇಸ್ ಕಾರ್ಗೊ ಅನ್‌ಲಿಮಿಟೆಡ್ 12 ವೈನ್ ಬಾಟಲಿಗಳನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ಕಳುಹಿಸಿಕೊಟ್ಟಿತ್ತು.

ಬಾಹ್ಯಾಕಾಶದಲ್ಲಿ 400 ದಿನಗಿಂತಲೂ ಹೆಚ್ಚು ಶೂನ್ಯ ಗುರುತ್ವಾಕರ್ಷಣೆಯಲ್ಲಿ ಸುಮಾರು 300 ಮಿಲಿಯನ್ ಕಿ.ಮೀ. ಪ್ರಯಾಣಿಸಿದ ನಂತರ 2021ರ ಜನವರಿಯಲ್ಲಿ ಭೂಮಿಗೆ ಮರಳಿತ್ತು.

ಭೂಮಿಯಲ್ಲಿರುವ ವೈನ್‌ಗಳಿಗೆ ಹೋಲಿಸಿದಾಗ ಇದರ ರುಚಿ ಸಂಪೂರ್ಣ ವಿಭಿನ್ನವಾfಗಿರಲಿದೆ ಎಂದು ಫ್ರಾನ್ಸ್‌ನ ಬೋರ್ಡೆಕ್ಸ್ ಇನ್‌ಸ್ಟಿಟ್ಯೂಟ್ ಫಾರ್ ವೈನ್ ಆ್ಯಂಡ್ ವೈನ್ ರಿಸರ್ಚ್‌ನ ಸಂಶೋಧಕರು ವಿಶ್ಲೇಷಣೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.