ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಿಪಣಿ ದಾಳಿ: ಕೆಂಪು ಸಮುದ್ರದಲ್ಲಿ ಹಡಗಿಗೆ ಹಾನಿ

Published 28 ಮೇ 2024, 14:20 IST
Last Updated 28 ಮೇ 2024, 14:20 IST
ಅಕ್ಷರ ಗಾತ್ರ

ದುಬೈ: ಯೆಮೆನ್‌ನ ಕರಾವಳಿಯ ಕೆಂಪು ಸಮುದ್ರದಲ್ಲಿ ಮಂಗಳವಾರ ನಡೆದ ಕ್ಷಿಪಣಿ ದಾಳಿಯಿಂದ ಹಡಗಿಗೆ ಹಾನಿಯಾಗಿದೆ. ಈ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆಗಳು ಹೊತ್ತುಕೊಂಡಿಲ್ಲ. 

ಗಾಜಾ ಪಟ್ಟಿಯಲ್ಲಿ ಹಮಾಸ್ ಬಂಡುಕೋರರನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ನಿಲ್ಲಿಸಬೇಕು ಎಂದು ಒತ್ತಾಯಿಸಿ ಕೆಂಪು ಸಮುದ್ರದಲ್ಲಿ ಹಲವು ಹಡಗುಗಳನ್ನು ಗುರಿಯಾಗಿಸಿ ಯೆಮೆನ್ ಹೂಥಿ ಬಂಡುಕೋರರು ದಾಳಿಗಳನ್ನು ನಡೆಸಿದ್ದರು. ಹೀಗಾಗಿ, ಈ ದಾಳಿಯನ್ನು ಸಹ ಹೂಥಿ ಬಂಡುಕೋರರು ಎಸಗಿರಬಹುದು ಎಂದು ಶಂಕಿಸಲಾಗಿದೆ. 

ಹಡಗಿಗೆ ಅಷ್ಟೇನೂ ಹಾನಿಯಾಗಿಲ್ಲ. ಸುರಕ್ಷಿತವಾಗಿದ್ದು, ಮುಂದಿನ ಬಂದರು ಪ್ರದೇಶಕ್ಕೆ ಕೊಂಡೊಯ್ಯಲಾಗುವುದು ಎಂದು ಹಡಗಿನ ಸಿಬ್ಬಂದಿ ತಿಳಿಸಿದ್ದಾರೆ.  

ಗಾಜಾ ಪಟ್ಟಿ ಮೇಲಿನ ಇಸ್ರೇಲ್ ದಾಳಿ ವಿರೋಧಿಸಿ ಹೂಥಿ ಬಂಡುಕೋರರು ಕಳೆದ ವರ್ಷದ ನವೆಂಬರ್‌ನಿಂದ ಈವರೆಗೆ 50ಕ್ಕೂ ಹೆಚ್ಚು ದಾಳಿಗಳನ್ನು ನಡೆಸಿದ್ದಾರೆ. ಇದರಿಂದಾಗಿ ಕೆಂಪು ಸಮುದ್ರ ಮತ್ತು ಆಡನ್ ಕೊಲ್ಲಿ ಮೂಲಕ ಸಂಚರಿಸುವ ಹಡಗುಗಳ ಸಂಖ್ಯೆಯಲ್ಲಿ ಭಾರಿ ಇಳಿಮುಖವಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT