ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಷ್ಕರ: ಶ್ರೀಲಂಕಾದಲ್ಲಿ ಪರದಾಡಿದ ರೈಲು ಪ್ರಯಾಣಿಕರು

Published 10 ಜುಲೈ 2024, 13:37 IST
Last Updated 10 ಜುಲೈ 2024, 13:37 IST
ಅಕ್ಷರ ಗಾತ್ರ

ಕೊಲಂಬೊ: ಸ್ಟೇಷನ್ ಮಾಸ್ಟರ್‌ಗಳ ಸಂಘವು ಮುಷ್ಕರ ನಡೆಸಿದ್ದರಿಂದ ಶ್ರೀಲಂಕಾದ ಬಹುತೇಕ ರೈಲುಗಳ ಸಂಚಾರದಲ್ಲಿ ಬುಧವಾರ ವ್ಯತ್ಯಯವಾಯಿತು. ಸಂಚರಿಸಿದ ಕೆಲವೇ ರೈಲುಗಳಲ್ಲಿ ಪ್ರಯಾಣಿಕರು ಕಿಕ್ಕಿರಿದು ಸಾಗಬೇಕಾದ ಸ್ಥಿತಿ ಉಂಟಾಯಿತು.

ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಬೇಕು ಹಾಗೂ ಆಡಳಿತ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒ‌ತ್ತಾಯಿಸಿ ಸಂಘವು ಮುಷ್ಕರ ನಡೆಸಿತು. 

ಶ್ರೀಲಂಕಾದ ಸಾರಿಗೆ ಸಚಿವ ಬಂದುಲ ಗುಣವರ್ದೆನ ಅವರು ಮುಷ್ಕರ ನಡೆಸಿರುವುದನ್ನು ಖಂಡಿಸಿದರು. ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿರುವಾಗ ಈ ರೀತಿ ಮುಷ್ಕರ ನಡೆಸಿ ಜನರಿಗೆ ತೊಂದರೆ ಒಡ್ಡುವುದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದರು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಇದೇ ರೀತಿ ಮುಷ್ಕರ ನಡೆಸಲಾಗಿತ್ತು. ಆಗ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿ, ಬೋಗಿಯೊಂದರ ಮೇಲೆ ಹತ್ತಿದ್ದ ಪ್ರಯಾಣಿಕರೊಬ್ಬರ ತಲೆಯು ಸೇತುವೆಗೆ ಬಡಿದು, ಮೃತಪಟ್ಟಿದ್ದರು. ಮತ್ತೊಬ್ಬರು, ಫುಟ್‌ಬೋರ್ಡ್‌ನಿಂದ ಕಾಲುಜಾರಿ ಬಿದ್ದು, ಗಂಭೀರ ಗಾಯಗಳಾಗಿ ಅಸುನೀಗಿದ್ದರು. 

ಬುಧವಾರ ಸಂಚರಿಸಿದ ಕೆಲವೇ ರೈಲುಗಳಲ್ಲಿ ಶ್ರೀಲಂಕಾ ಪ್ರಯಾಣಿಕರು ಜೀವ ಪಣಕ್ಕಿಟ್ಟಂತೆ ಫುಟ್‌ಬೋರ್ಡ್‌ಗಳ ಮೇಲೆ ಪಯಣಿಸಿದರು. ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ದೂರದ ಕಚೇರಿಗಳಿಗೆ ತೆರಳುವ ಉದ್ಯೋಗಿಗಳು ಪಡಿಪಾಟಲುಪಟ್ಟರು. 

A railway union strike in Sri Lanka leaves tens of thousands of commuters stranded

Colombo, Jul 10 (AP) A railway union strike stopped most trains across Sri Lanka on Wednesday, leaving tens of thousands of passengers to brave the few dangerously overcrowded trains that kept running or be stranded at the station.

The Station Masters' Union launched the strike to demand that vacancies be filled and other administrative issues be resolved.

Hundreds of scheduled train journeys were canceled Wednesday due to the strike, leaving the very few trains that ran jam-packed with passengers.

Local TV stations showed people risking their lives to get to school and work, barely hanging on to the sides of the train while balancing on footboards made slippery by the rain.

Transport Minister Bandula Gunawardena condemned the strike, saying the union launched the strike in an arbitrary manner when the government was taking steps to resolve the issues they raised.

During a similar strike in September, two passengers were killed while traveling on packed trains: One was traveling on the roof of a compartment when his head hit an overhead railway bridge, and the other succumbed to injuries after he fell from the train's footboard.

Sri Lanka's train services are substandard, with poorly maintained compartments and tracks because of years of mismanagement and a lack of proper planning.

Frequent and sudden strikes have exacerbated the situation, with most trains experiencing delays. (AP) NPK NPK

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT