ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನದಲ್ಲಿ ಪ್ರವಾಹ: ಸಂಕಷ್ಟದಲ್ಲಿ ಮಕ್ಕಳು

Published 4 ಜೂನ್ 2024, 3:28 IST
Last Updated 4 ಜೂನ್ 2024, 3:28 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಅಫ್ಗಾನಿಸ್ತಾನದಲ್ಲಿ ಉಂಟಾಗಿರುವ ಪ್ರವಾಹದಿಂದಾಗಿ ಸಾವಿರಾರು ಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಯುನಿಸೆಫ್‌ ತಿಳಿಸಿದೆ. 

ಹವಾಮಾನ ವೈಪರೀತ್ಯದಿಂದಾಗಿ ಅಫ್ಗಾನಿಸ್ತಾನದಲ್ಲಿ ಕಳೆದ ವರ್ಷ ತೀವ್ರ ಬರ ಕಾಡಿದ್ದ ಪ್ರದೇಶಗಳಲ್ಲಿಯೂ ಪ್ರಸ್ತುತ ಭಾರಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಹದಿಂದಾಗಿ ಕಳೆದ ಮೇ ತಿಂಗಳಲ್ಲಿ ಕನಿಷ್ಠ 300 ಮಂದಿ ಮೃತಪಟ್ಟಿದ್ದರು. ಸಾವಿರಾರು ಮನೆಗಳು ಕುಸಿದಿದ್ದವು ಎಂದು ವಿಶ್ವಸಂಸ್ಥೆ ಹೇಳಿದೆ. 

ಇತ್ತೀಚಿನ ಪ್ರವಾಹ, ದೀರ್ಘಕಾಲೀನ ಬರ ಪರಿಸ್ಥಿತಿಯಿಂದ ಹತ್ತರಲ್ಲಿ ಮೂವರು ಮಕ್ಕಳಿಗೆ ಆಹಾರದ ಕೊರತೆ ಸಮಸ್ಯೆ ಉದ್ಭವಿಸಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ ಪ್ರಸಕ್ತ ವರ್ಷದಲ್ಲಿ ಕನಿಷ್ಠ 65 ಲಕ್ಷ ಮಕ್ಕಳು ಆಹಾರ ಬಿಕ್ಕಟ್ಟಿನ ಸಮಸ್ಯೆ ಎದುರಿಸಬೇಕಾದ ಅನಿವಾರ್ಯತೆ ಇದೆ ಎಂಬುದಾಗಿ ‘ಸೇವ್‌ ದ ಚಿಲ್ಡ್ರನ್‌’ ಸಂಸ್ಥೆ ಹೇಳಿದೆ.

ಅಂತರರಾಷ್ಟ್ರೀಯ ಸಮುದಾಯವು ಸಂಕಷ್ಟದಲ್ಲಿ ರುವ ಮಕ್ಕಳ ನೆರವಿಗೆ ಮುಂದಾಗಬೇಕು ಎಂದು ಯುನಿಸೆಫ್‌ ಅಫ್ಗಾನಿಸ್ತಾನ ಘಟಕದ ರಾಯಭಾರಿ ಡಾ.ತಾಜುದ್ದೀನ್‌ ಓಯೆವಾಲೆ ಕರೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT