ಸ್ಪಿನ್ ಬೋಲ್ಡಾಕ್ (ಅಫ್ಗಾನಿಸ್ತಾನ): ಪಾಕಿಸ್ತಾನದೊಂದಿಗಿನ ಗಡಿ ಸಂಘರ್ಷದಲ್ಲಿ ತನ್ನ 15 ನಾಗರಿಕರು ಮೃತಪಟ್ಟಿದ್ದಾರೆ ಎಂದು ಅಫ್ಗನ್ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಕಂದಹಾರ್ ಪ್ರಾಂತ್ಯದಲ್ಲಿ ಗಡಿ ಸಂಘರ್ಷ ಉಂಟಾಗಿದೆ. 80ಕ್ಕೂ ಅಧಿಕ ಮಹಿಳೆಯರು ಮತ್ತು ಮಕ್ಕಳು ಗಾಯಗೊಂಡಿದ್ದು, ಸ್ಪಿನ್ ಬೋಲ್ಡಾಕ್ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಗಡಿ ಭಾಗದ ನಾಗರಿಕರ ಮೇಲಿನ ಪಾಕಿಸ್ತಾನದ ದಾಳಿಯನ್ನು ತಾಲಿಬಾನ್ ಸರ್ಕಾರವು ಖಂಡಿಸಿದೆ.

ಸ್ಪಿನ್ ಬೋಲ್ಡಾಕ್ ಭಾಗದಲ್ಲಿ ಎಲ್ಲಾ ರೀತಿಯ ವ್ಯಾಪಾರ ಚಟುವಟಿಕೆಯನ್ನು ನಿಲ್ಲಿಸಲಾಗಿದೆ. ನಾಗರಿಕರು ಕೂಡ ಅಲ್ಲಿಂದ ಬೇರೆಡೆಗೆ ತೆರಳುತ್ತಿದ್ದಾರೆ.

ಪಾಕಿಸ್ತಾನದಲ್ಲಿ ಭಯೋತ್ಪಾದಕ ಕೃತ್ಯದಲ್ಲಿ ತೊಡಗಿಸಿಕೊಂಡಿರುವ ಪಾಕಿಸ್ತಾನಿ ತಾಲಿಬಾನ್ಗೆ(ಟಿಟಿಪಿ) ಅಫ್ಗನ್ ಆಶ್ರಯ ನೀಡುತ್ತಿದೆ ಎಂದು ಪಾಕಿಸ್ತಾನ ಆರೋಪಿಸುತ್ತಿದೆ.

ಪಾಕಿಸ್ತಾನವು ವಾಯುದಾಳಿ ನಡೆಸಿದೆ ಎಂದು ಆರೋಪಿಸಿ, ಶನಿವಾರ ಸಾಯಂಕಾಲ ಗಡಿ ಭಾಗದ ಐದು ಪ್ರಾಂತ್ಯಗಳ ಮೇಲೆ ಅಫ್ಗನ್ ದಾಳಿ ಮಾಡಿತ್ತು. ಇದು ಉಭಯ ದೇಶಗಳ ನಡುವಿನ ಗಡಿ ಸಂಘರ್ಷಕ್ಕೆ ಕಾರಣವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.