ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಡಾನ್‌: ಡ್ರೋನ್‌ ದಾಳಿ, ಕನಿಷ್ಠ 43 ಮಂದಿ ಸಾವು

Published 10 ಸೆಪ್ಟೆಂಬರ್ 2023, 13:01 IST
Last Updated 10 ಸೆಪ್ಟೆಂಬರ್ 2023, 13:01 IST
ಅಕ್ಷರ ಗಾತ್ರ

ಕೈರೊ: ಸುಡಾನ್‌ನ ರಾಜಧಾನಿಯಲ್ಲಿ ಸೇನೆ ಮತ್ತು ಅರೆಸೇನಾ ಪಡೆಗಳ ನಡುವಿನ ಸಂಘರ್ಷ ಮುಂದುವರಿದಿದೆ. ಖಾರ್ಟೂಮ್‌ನಲ್ಲಿ ಮಾರುಕಟ್ಟೆಯೊಂದರ ಮೇಲೆ ಭಾನುವಾರ ಡ್ರೋನ್‌ ದಾಳಿ ನಡೆದಿದ್ದು, ಕನಿಷ್ಠ 43 ಜನರು ಮೃತಪಟ್ಟಿದ್ದಾರೆ.

ಅಲ್ಲದೆ, 55ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ರಕ್ಷಣಾ ಕಾರ್ಯಕರ್ತರು ತಿಳಿಸಿದ್ದಾರೆ.

ದೇಶದ ಮೇಲೆ ಹಿಡಿತಕ್ಕೆ ಸೇನೆ ಮುಖ್ಯಸ್ಥ ಜನರಲ್‌ ಅಬ್ದೆಲ್‌ ಫಟ್ಟ್ಹಾಬುರ‍್ಹಾನ್, ಅರೆಸೇನಾ ಪಡೆಯ ಮುಖ್ಯಸ್ಥ ಜನರಲ್‌ ಮೊಹಮ್ಮದ್‌ ಹಮ್ದನ್ ಡಗಲೊ ಅವರು ಸಂಘರ್ಷ ನಡೆಸಿದ್ದಾರೆ. ಪರಿಣಾಮ ಈ ವರ್ಷದ ಏಪ್ರಿಲ್‌ ಮಧ್ಯಭಾಗದಿಂದಲೂ ಬಿಗುವಿನ ಸ್ಥಿತಿ ಇದೆ. ಹಲವೆಡೆ ಹೆಚ್ಚಿನ ಪಡೆಗಳನ್ನು ಭದ್ರತೆಗೆ ನಿಯೊಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT