ಅಲ್ಜೀರಿಯಾ: ಕಾಳ್ಗಿಚ್ಚು ಆರಂಭವಾಗಲು ಕಾರಣಕರ್ತ ಎಂಬ ಶಂಕೆಯಡಿ ಕಲಾವಿದರೊಬ್ಬರನ್ನು ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಒಟ್ಟು 49 ಜನರಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಿಅಲ್ಜೀರಿಯಾದ ಕೋರ್ಟ್ ಗುರುವಾರ ಆದೇಶಿಸಿದೆ.

ಗುಂಪು ಹಲ್ಲೆಯಿಂದ ಮೃತಪಟ್ಟಿದ್ದ ವ್ಯಕ್ತಿಕಾಳ್ಗಿಚ್ಚು ನಂದಿಸುವ ಕಾರ್ಯಕ್ಕೆ ನೆರವಾಗಲು ಧಾವಿಸಿದ್ದರು ಎಂದು ಅವರ ಪರ ವಕೀಲರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಆಗಸ್ಟ್ 2021ರಲ್ಲಿ ಕಬೈಲಿ ಪ್ರಾಂತ್ಯದಲ್ಲಿಕಾಳ್ಗಿಚ್ಚು ಕಾಣಿಸಿಕೊಂಡಿದ್ದ ಸಂದರ್ಭದಲ್ಲಿ ಕೃತ್ಯ ನಡೆದಿತ್ತು.

ಬೆರ್ಬರ್ ವಲಯದ ಬೆಟ್ಟ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ನಂದಿಸಲು ಧಾವಿಸಿದ್ದ ಯೋಧರು ಒಳಗೊಂಡಂತೆ 90 ಜನರು ಮೃತಪಟ್ಟಿದ್ದರು. ಗುಂಪಿನ ಆಕ್ರೋಶಕ್ಕೆ ಕಲಾವಿದ ಜಮೆಲ್ ಬೆನ್ ಇಸ್ಮಾಯಿಲ್ ಮೃತಪಟ್ಟಿದ್ದರು.

ಅರಣದತ್ತ ಹೋಗುವ ಮೊದಲು, ‘ಬೆಂಕಿ ನಂದಿಸಲು ಗೆಳೆಯರಿಗೆ ನೆರವಾಗಲು ಹೋಗುತ್ತಿದ್ದೇನೆ’ ಎಂದು ಕಲಾವಿದ ಟ್ವೀಟ್ ಮಾಡಿದ್ದರು. ಈ ಪ್ರಕರಣದಲ್ಲಿ 38 ಜನರಿಗೆ ಎರಡರಿಂದ 12 ವರ್ಷದವರೆಗೆ ಸಜೆಯನ್ನು ಕೋರ್ಟ್ ವಿಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.