ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಕ್ರೇನ್‌–ರಷ್ಯಾ ಯುದ್ಧದಲ್ಲಿ ಮತ್ತೊಬ್ಬ ಭಾರತೀಯ ಸಾವು

Published 12 ಜೂನ್ 2024, 16:28 IST
Last Updated 12 ಜೂನ್ 2024, 16:28 IST
ಅಕ್ಷರ ಗಾತ್ರ

ಅಮೃತ್‌ಸರ : ಉಕ್ರೇನ್‌ ಜೊತೆಗಿನ ಯುದ್ಧದಲ್ಲಿ ರಷ್ಯಾ ಸೇನೆಯಲ್ಲಿದ್ದ ಭಾರತದ ಮತ್ತೊಬ್ಬ ಯೋಧ ಮೃತಪಟ್ಟಿದ್ದಾರೆ.

ಇವರ ಮೃತದೇಹವನ್ನು ಭಾರತಕ್ಕೆ ತರಲು ಸಹಕರಿಸುವಂತೆ ಆತನ ಕುಟುಂಬಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಅಮೃತ್‌ಸರ ಮೂಲದ ತೇಜ್‌ಪಾಲ್ ಸಿಂಗ್ (30) ಮೃತಪಟ್ಟಿರುವ ಯೋಧ. ‘ತೇಜ್‌ಪಾಲ್ ಉದ್ಯೋಗಕ್ಕಾಗಿ 2023 ಡಿಸೆಂಬರ್‌ ತಿಂಗಳಿನಲ್ಲಿ ಥಾಯ್ಲೆಂಡ್‌ಗೆ ಪ್ರಯಾಣ ಬೆಳೆಸಿದ್ದರು. ಬಳಿಕ ಸ್ನೇಹಿತರೊಂದಿಗೆ ರಷ್ಯಾಕ್ಕೆ ತೆರಳಿದ್ದ ತೇಜ್‌ಪಾಲ್ ಜನವರಿ 12ರಂದು ರಷ್ಯಾ ಸೇನೆಗೆ ಸೇರಿದ್ದ’ ಎಂದು ತೇಜ್‌ಪಾಲ್‌ ಪತ್ನಿ ಪರ್ಮಿಂದರ್‌ ಕೌರ್‌ ತಿಳಿಸಿದ್ದಾರೆ.

‘ಎರಡು ದಿನಗಳ ಹಿಂದೆ ನನ್ನ ಪತಿಯ ಗೆಳೆಯರೊಬ್ಬರು ಕರೆ ಮಾಡಿ ಉಕ್ರೇನ್ ಜೊತೆಗಿನ ಯುದ್ಧದ ವೇಳೆ ತೇಜ್‌ಪಾಲ್‌ ಮೃತಪಟ್ಟಿದ್ದಾರೆ ಎಂದು ತಿಳಿಸಿದರು. ಕಳೆದ ಮಾರ್ಚ್ ತಿಂಗಳಿನಲ್ಲಿಯೇ ಅವರು ನಿಧನರಾಗಿದ್ದಾರೆ. ಆದರೆ, ಯುದ್ಧದಿಂದಾಗಿ ನಮಗೆ ತಡವಾಗಿ ಮಾಹಿತಿ ಸಿಕ್ಕಿದೆ’ ಎಂದು ತಿಳಿಸಿದರು.

‘ತೇಜ್‌ಪಾಲ್‌ ಮೃತದೇಹ ರಷ್ಯಾದಲ್ಲಿ ಇದೆಯೇ ಅಥವಾ ಉಕ್ರೇನ್ ವಶದಲ್ಲಿದೆಯೇ ಎಂಬ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಅಂತಿಮ ವಿಧಿ–ವಿಧಾನಗಳಿಗಾಗಿ ಶವವನ್ನು ಭಾರತಕ್ಕೆ ಕಳುಹಿಸುವಂತೆ ರಷ್ಯಾ ಸೇನೆ ಮತ್ತು ವಿದೇಶಾಂಗ ಇಲಾಖೆಗೆ ಇ–ಮೇಲ್ ಸಂದೇಶವನ್ನು ಕಳುಹಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT