ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಸ್ರೇಲ್‌ ದಾಳಿ: ಗಾಜಾದಲ್ಲಿ 93 ಸಾವು

Published 10 ಆಗಸ್ಟ್ 2024, 14:45 IST
Last Updated 10 ಆಗಸ್ಟ್ 2024, 14:45 IST
ಅಕ್ಷರ ಗಾತ್ರ

ದೇರ್‌–ಅಲ್‌–ಬಲಾಹ್: ನಿರಾಶ್ರಿತರ ಶಿಬಿರವನ್ನಾಗಿ ಮಾರ್ಪಾಡು ಮಾಡಲಾಗಿದ್ದ ಗಾಜಾದ ತಬೀನ್‌ ಶಾಲೆ ಮೇಲೆ ಇಸ್ರೇಲ್‌ ಶನಿವಾರ ವಾಯುದಾಳಿ ನಡೆಸಿದ ಪರಿಣಾಮ ಕನಿಷ್ಠ 93 ಮಂದಿ ಮೃತಪಟ್ಟಿದ್ದು, 47 ಮಂದಿ ಗಾಯಗೊಂಡಿದ್ದಾರೆ.

ಇಸ್ರೇಲ್‌ ಸೇನೆ ಈ ದಾಳಿಯ ಹೊಣೆಹೊತ್ತಿದೆ. ಶಾಲೆಯಲ್ಲಿ ಹಮಾಸ್‌ ಬಂಡುಕೋರರು ಅಡಗಿದ್ದರು. ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ ಹೇಳಿದೆ. ಆದರೆ, ಇಸ್ರೇಲ್‌ ಆರೋಪವನ್ನು ಹಮಾಸ್‌ ತಳ್ಳಿಹಾಕಿದೆ. 

ಆಶ್ರಯ ಪಡೆದಿದ್ದವರು ಶಾಲೆಯೊಳಗಿದ್ದ ಮಸೀದಿಯಲ್ಲಿ ನಸುಕಿನ ಜಾವ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಇನ್ನೂ ಹಲವರು ಮಲಗಿದ್ದಾಗ ಮೂರು  ಕ್ಷಿಪಣಿಗಳ ದಾಳಿ ನಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. 

ಮೃತರಲ್ಲಿ ಹಲವರ ಗುರುತು ಪತ್ತೆಮಾಡಲು ಸಾಧ್ಯವಾಗುತ್ತಿಲ್ಲ. ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. 

’ಮಸೀದಿಯಲ್ಲಿದ್ದವರೆಲ್ಲರೂ ಸಾವಿಗೀಡಾಗಿದ್ದಾರೆ‘ ಎಂದು ಸ್ಥಳೀಯ ನಿವಾಸಿ ಅಬು ವಾಸೀಮ್‌ ತಿಳಿಸಿದ್ದಾರೆ.

ಖಂಡನೆ: ದಾಳಿಯನ್ನು ಹಲವು ದೇಶಗಳು ಖಂಡಿಸಿವೆ. 

ಈ ದಾಳಿಯಿಂದ ಶಾಂತಿ ಸ್ಥಾಪಿಸುವ ಪ್ರಯತ್ನಗಳಿಗೆ ಇಸ್ರೇಲ್‌ ಅಡ್ಡಿಪಡಿಸುತ್ತಿದೆ ಎಂದು ಜೋರ್ಡಾನ್‌ ವಿದೇಶಾಂಗ ಸಚಿವಾಲಯ ತಿಳಿಸಿದೆ.

’ಗಾಜಾದಲ್ಲಿ ಸಾಮೂಹಿಕ ಹತ್ಯೆ ನಡೆಯುವುದನ್ನು ತಡೆಯಬೇಕು‘ ಎಂದು ಸೌದಿ ಅರೇಬಿಯಾ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT