ಆಮ್ಸ್ಟರ್ಡ್ಯಾಮ್: ನಾರ್ವೆಯ ಓಸ್ಲೋ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದ ಡಚ್ ವಿಮಾನಯಾನ ಸಂಸ್ಥೆ ಕೆಎಲ್ಎಂನ ಬೋಯಿಂಗ್ 737 ವಿಮಾನ, ರನ್ ವೇ ಬಿಟ್ಟು ಪಕ್ಕದ ಹುಲ್ಲಿನ ಹಾಸಿನ ಮೇಲೆ ಜಾರಿದ ಘಟನೆ ಶನಿವಾರ ನಡೆದಿದೆ. ವಿಮಾನದಲ್ಲಿದ್ದ 182 ಮಂದಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಓಸ್ಲೋ ವಿಮಾನ ನಿಲ್ದಾಣದಿಂದ ಆಮ್ಸ್ಟರ್ಡ್ಯಾಮ್ಗೆ ಹೊರಟಿದ್ದ ಬೋಯಿಂಗ್ 737 ವಿಮಾನದಲ್ಲಿ ಟೇಕಾಫ್ ಆದ ಸ್ವಲ್ಪ ಸಮಯದ ನಂತರ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತ ಸಿಬ್ಬಂದಿ ಓಸ್ಲೋದಿಂದ ದಕ್ಷಿಣಕ್ಕೆ 110 ಕಿ.ಮೀ ದೂರದಲ್ಲಿರುವ ಓಸ್ಲೋ ಟಾರ್ಪ್ ಸ್ಯಾಂಡೆಫ್ಜೋರ್ಡ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
.ದ.ಕೊರಿಯಾ ವಿಮಾನ ದುರಂತ: 179 ಮಂದಿ ಸಾವು, ಇಬ್ಬರ ರಕ್ಷಣೆ.Flight Crash: ಚಿತ್ರಗಳಲ್ಲಿ ನೋಡಿ- ಪುಡಿ ಪುಡಿಯಾದ ದಕ್ಷಿಣ ಕೊರಿಯಾ ವಿಮಾನ!.
ವಿಮಾನವು ಓಸ್ಲೋ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿತ್ತಾದರೂ ರನ್ವೇ 18ರಲ್ಲಿ ಸಾಗುವ ವೇಳೆ ನಿಯಂತ್ರಣ ಕಳೆದುಕೊಂಡಿತ್ತು. ಸುದೈವವಶಾತ್ ಕೊನೆಗೆ ಟ್ಯಾಕ್ಸಿವೇ ಪಕ್ಕದಲ್ಲಿರುವ ಮೃದುವಾದ ಹುಲ್ಲು ಹಾಸಿನ ಮೇಲೆ ನಿಂತಿತ್ತು ಎಂದು ಅವರು ತಿಳಿಸಿದ್ದಾರೆ.

ಈ ವಿಮಾನದಲ್ಲಿ ಸಿಬ್ಬಂದಿ ಮತ್ತು ಪ್ರಯಾಣಿಕರು ಸೇರಿ ಒಟ್ಟು 182 ಮಂದಿ ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ತಿಳಿಸಿದ್ದಾರೆ.
.ಲ್ಯಾಂಡಿಂಗ್ ವೇಳೆ ಏರ್ ಕೆನಡಾ ವಿಮಾನದಲ್ಲಿ ಬೆಂಕಿ; ತಪ್ಪಿದ ಮತ್ತೊಂದು ಅವಘಡ.ಕಜಕಸ್ತಾನ | ವಿಮಾನ ಅಪಘಾತ: 38 ಮಂದಿ ಸಾವು.
ಅವಘಡದ ಬಗ್ಗೆ ವಿಮಾನಯಾನ ಸಂಸ್ಥೆ ಕೆಎಲ್ಎಂ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ.

ದಕ್ಷಿಣ ಕೊರಿಯಾದ ಮುಯಾನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 175ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಭೀಕರ ವಿಮಾನ ಅಪಘಾತದ ಬೆನ್ನಲ್ಲೇ ಈ ಘಟನೆ ಬೆಳಕಿಗೆ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.