ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೊಹರಂ: ದೇಶದಾದ್ಯಂತ ಬಿಗಿ ಭದ್ರತೆಗೆ ಪಾಕ್‌ ತೀರ್ಮಾನ

Published 8 ಜುಲೈ 2024, 14:06 IST
Last Updated 8 ಜುಲೈ 2024, 14:06 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಮೊಹರಂ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ದೇಶದಾದ್ಯಂತ ಸೈನಿಕರನ್ನು ನಿಯೋಜಿಸಲು ಪಾಕಿಸ್ತಾನ ಸರ್ಕಾರ ಸೋಮವಾರ ನಿರ್ಧರಿಸಿದೆ.

ಶಿಯಾ ಮುಸ್ಲಿಮರ ರ‍್ಯಾಲಿ ಸಂದರ್ಭದಲ್ಲಿ ಭಯೋತ್ಪಾದಕರು ದಾಳಿ ನಡೆಸಬಹುದು ಎಂಬ ಕಾರಣದಿಂದ ಈ ತೀರ್ಮಾನ ಮಾಡಿದೆ.

ಇಸ್ಲಾಮಿಕ್‌ ಕ್ಯಾಲೆಂಡರ್‌ನ ಮೊದಲ ತಿಂಗಳು ಮೊಹರಂ. ಅದು ಸೋಮವಾರದಿಂದ ಆರಂಭವಾಗಿದೆ.

ಶಿಯಾ ಮುಸ್ಲಿಮರು, ಪ್ರವಾದಿ ಮಹಮ್ಮದ್ ಅವರ ಮೊಮ್ಮಗ ಹುಸೇನ್‌ ಇಬ್ನ ಅಲಿ ಸ್ಮರಣಾರ್ಥ ತಿಂಗಳ ಮೊದಲ 10 ದಿನ ರ‍್ಯಾಲಿ ನಡೆಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT