ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ: ಚಿನ್ನದ ಗಣಿಯೊಳಗೆ ಸಿಲುಕಿದ 13 ಮಂದಿ

Published 19 ಮಾರ್ಚ್ 2024, 12:49 IST
Last Updated 19 ಮಾರ್ಚ್ 2024, 12:49 IST
ಅಕ್ಷರ ಗಾತ್ರ

ಮಾಸ್ಕೊ: ಪೂರ್ವ ರಷ್ಯಾದ ಝೆಯ್‌ಸ್ಕ್‌ ಜಿಲ್ಲೆಯಲ್ಲಿರುವ ಚಿನ್ನದ ಗಣಿ ಕುಸಿದು ಬಿದ್ದಿದ್ದು, ಕನಿಷ್ಠ 13 ಜನರು ಅದರೊಳಗೆ ಸಿಲುಕಿದ್ದಾರೆ ಎಂದು ಪ್ರಾದೇಶಿಕ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

‘ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. 125 ಮೀಟರ್‌ ಆಳದಲ್ಲಿ ಸಿಲುಕಿರುವ ಸಂತ್ರಸ್ತರನ್ನು ತಲುಪಲು ಕ್ಷೀಪ್ರ ಕಾರ್ಯಾಚರಣೆ ಪಡೆ ಹರಸಾರಸ ನಡೆಸುತ್ತಿದೆ’ ಎಂದು ತಿಳಿಸಿದ್ದಾರೆ.

ಅವಘಡಕ್ಕೆ ಕಾರಣ ಏನೆಂದು ಅಧಿಕಾರಿಗಳು ಇನ್ನೂ ತಿಳಿಸಿಲ್ಲ. ಸುರಕ್ಷತಾ ಮಾನದಂಡ ಉಲ್ಲಂಘನೆಯಿಂದಲೇ ಈ ಹಿಂದೆ ಇಂಥ ಅನೇಕ ಅವಘಡಗಳು ಸಂಭವಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT