ಮಾಪ್ಟೊ: ಪೂರ್ವ ಆಫ್ರಿಕಾದ ರಾಷ್ಟ್ರವಾದ ಮೊಜಾಂಬಿಕಾದ ಮೇಲೆ ಚಿಡೊ ಚಂಡಮಾರುತ ಅಪ್ಪಳಿಸಿರುವ ಪರಿಣಾಮ ಇಲ್ಲಿವರೆಗೆ ಕನಿಷ್ಠ 34 ಜನ ಮೃತಪಟ್ಟಿದ್ದಾರೆ.

ಚಿಡೊ ಚಂಡಮಾರುತ ಪರಿಣಾಮ ಮೊಜಾಂಬಿಕಾದ ಕರಾವಳಿ ಹಾಗೂ ಒಳನಾಡಿನಲ್ಲಿ ಭಾರಿ ಪ್ರಮಾಣದ ಗಾಳಿ, ಮಳೆ ಹಾಗೂ ಭೂಕುಸಿತಗಳು ಸಂಭವಿಸಿವೆ. ಇದರಿಂದ ಅಲ್ಲಲ್ಲಿ ಪ್ರವಾಹ ಉಂಟಾಗಿದೆ ಎಂದು ಮೊಜಾಂಬಿಕಾದ ನೈಸರ್ಗಿಕ ವಿಕೋಪ ಪರಿಹಾರ ಪಡೆ ಕಚೇರಿ ತಿಳಿಸಿದೆ.

ಹಿಂದೂ ಮಹಾಸಾಗರದ ಮೊಜಾಂಬಿಕಾ ಚಾನಲ್ನಲ್ಲಿ ಭಾನುವಾರ ಉಂಟಾಗಿದ್ದ ಚಿಡೊ ಚಂಡಮಾರುತದಿಂದ ಸುಮಾರು 1.50 ಲಕ್ಷ ಜನರ ಮೇಲೆ ವಸತಿ, ಆಹಾರ ಸೇರಿದಂತೆ ಹಲವು ಕೆಟ್ಟ ಪರಿಣಾಮ ಉಂಟಾಗಿವೆ ಎಂದು ತಿಳಿಸಿದೆ. ಲಕ್ಷಾಂತರ ಮನೆಗಳ ಛಾವಣಿಗಳು ಗಾಳಿಗೆ ಹಾರಿ ಹೋಗಿವೆ.

2 ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿತ್ತು ರಕ್ಷಣಾ ತಂಡ ಪರಿಹಾರ ಕಾರ್ಯಾಚರಣೆಗಳನ್ನು ಆರಂಭಿಸಿದೆ ಎಂದು ಹೇಳಿದೆ.

ಚಂಡಮಾರುತದಿಂದ ಸಾವು–ನೋವಿನ ಪ್ರಮಾಣ ಇನ್ನೂ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಬಹುದು ಎಂದು ವಿಶ್ವಸಂಸ್ಥೆಯ ಮಾನವೀಯ ಕಾರ್ಯಪಡೆ ಒಸಿಎಚ್ಎ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.