ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ| ಕಾಳ್ಗಿಚ್ಚು, ನೀರಿನ ಹಾಹಾಕಾರ: 10 ಸಾವಿರ ಒಂಟೆಗಳ ಹತ್ಯೆಗೆ ಚಿಂತನೆ

Last Updated 8 ಜನವರಿ 2020, 9:51 IST
ಅಕ್ಷರ ಗಾತ್ರ

ಸಿಡ್ನಿ:ಕಾಳ್ಗಿಚ್ಚಿನಿಂದ ತತ್ತರಿಸಿರುವ ಆಸ್ಟ್ರೇಲಿಯಾದ ಮೂಲನಿವಾಸಿಗಳು ಹೆಚ್ಚು ನೀರು ಬಳಸುವ ಒಂಟೆಗಳನ್ನುಹತ್ಯೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಐದು ದಿನಗಳಲ್ಲಿ ಸುಮಾರು 10,000ಕ್ಕೂ ಹೆಚ್ಚು ಒಂಟೆಗಳನ್ನುಕೊಲ್ಲುವ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಗುವುದುಎಂದು ಹೇಳಲಾಗಿದೆ.

ಒಂಟೆಗಳು ಹೆಚ್ಚು ನೀರನ್ನುಬಳಸುವುದರಿಂದಇಲ್ಲಿನ ಮೂಲ ನಿವಾಸಿಗಳಾದಕನ್ಯಪಿಸಮುದಾಯಕ್ಕೆ ತೊಂದರೆಯಾಗುತ್ತಿದೆ ಎಂದು ಇಲ್ಲಿನ ಸ್ಥಳೀಯ ಸಮುದಾಯ ಸಂಸ್ಥೆಯೊಂದರ ಸದಸ್ಯಮಾರ್ಟಿಯಾಬೇಕರ್‌ ತಿಳಿಸಿದ್ದಾರೆ.

ಬಿಸಿಲಿನಿಂದಇಲ್ಲಿನ ಜನರು ‌ತೊಂದರೆ ಅನುಭವಿಸುತ್ತಿದ್ದಾರೆ. ಜನರ ಆರೋಗ್ಯದಲ್ಲಿ ಏರುಪೇರಾಗಿದೆ. ಒಂಟೆಗಳು ನೀರಿಗಾಗಿ ಬೇಲಿಗಳನ್ನು ಮುರಿದು, ಮನೆಗಳಿಗೂ ಹಾನಿ ಮಾಡುತ್ತಿವೆ ಎಂದಿದ್ದಾರೆ.

ನವೆಂಬರ್‌ನಲ್ಲಿಸಂಭವಿಸಿದಕಾಳ್ಗಿಚ್ಚಿಗೆಆಸ್ಟ್ರೇಲಿಯಾತತ್ತರಿಸಿದೆ. 4 ಲಕ್ಷಕ್ಕೂ ಅಧಿಕ ಪ್ರಾಣಿಗಳು ಜೀವವನ್ನು ಕಳೆದುಕೊಂಡಿದ್ದು 12ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದುಸಿಡ್ನಿವಿಶ್ವವಿದ್ಯಾಲಯ ನಡೆಸಿದಅಧ್ಯಯನದಿಂದತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT