ಟೆಹರಾನ್: ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ಮೇಲೆ ನಡೆಸಿದ ಜಂಟಿ ಸೇನಾ ಕಾರ್ಯಾಚರಣೆಯ ನಂತರ, ಇರಾನ್ನ ಪರಮೋಚ್ಚ ನಾಯಕ ಅಯತ್ ಉಲ್ಲಾ ಅಲಿ ಖಮೇನಿ ಅವರ ಪ್ರಸ್ತುತ ಸ್ಥಿತಿಗತಿ ಹಾಗೂ ಇರುವಿಕೆಯ ಬಗ್ಗೆ ಅನಿಶ್ಚಿತತೆ ಮೂಡಿದೆ.
.ಖಮೇನಿ ಕಚೇರಿ ಸಮೀಪ ಇಸ್ರೇಲ್ ದಾಳಿ: ಏನಾಯಿತು ಇರಾನ್ನ ಪರಮೋಚ್ಚ ನಾಯಕನಿಗೆ?.
ಅವರು ಇರುವ ಸ್ಥಳದ ಬಗ್ಗೆ ನಿಖರ ಮಾಹಿತಿ ಇಲ್ಲ ಎಂದು ಹಲವು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ದಾಳಿ ಆರಂಭವಾಗುವುದಕ್ಕೂ ಮುನ್ನವೇ ಖಮೇನಿ ಅವರನ್ನು ಟೆಹರಾನ್ನ ಹೊರವಲಯದಲ್ಲಿರುವ ಗೋಪ್ಯ ‘ಸುರಕ್ಷಿತ ಸ್ಥಳ’ ಅಥವಾ ಬಂಕರ್ಗೆ ಸ್ಥಳಾಂತರಿಸಲಾಗಿತ್ತು ಎಂದು ರಾಯಿಟರ್ಸ್ ಸೇರಿದಂತೆ ಹಲವು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಏರ್ಬಸ್ ಡಿಫೆನ್ಸ್ ಆಂಡ್ ಸ್ಪೇಸ್ನಿಂದ ಲಭ್ಯವಾದ ಉಪಗ್ರಹ ಚಿತ್ರಗಳ ಪ್ರಕಾರ ಕೇಂದ್ರ ಟೆಹರಾನ್ನಲ್ಲಿರುವ ಖಮೇನಿ ಅವರ ಅಧಿಕೃತ ನಿವಾಸ ಮತ್ತು ಆಡಳಿತ ಕಟ್ಟಡಗಳ ಸಂಕೀರ್ಣವನ್ನು (ಬೈತ್-ಎ ರಹಬರಿ) ಗುರಿಯಾಗಿಸಿ ದಾಳಿ ನಡೆಸಲಾಗಿದ್ದು, ಅಲ್ಲಿ ಗಣನೀಯ ಪ್ರಮಾಣದ ಹಾನಿಯಾಗಿರುವುದನ್ನು ಖಚಿತಪಡಿಸಿವೆ.
.ಕೊಲ್ಲಿ ಯುದ್ದ | ಇರಾನ್ ಮೇಲೆ ಅಮೆರಿಕ, ಇಸ್ರೇಲ್ ದಾಳಿ: ಖಮೇನಿಯೇ ಗುರಿ.
‘ಖಮೇನಿ ಜೀವಂತವಾಗಿದ್ದಾರೆ. ಉನ್ನತ ಮಟ್ಟದ ಎಲ್ಲಾ ಅಧಿಕಾರಿಗಳು ದಾಳಿಯಿಂದ ಪಾರಾಗಿದ್ದಾರೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರು ಎನ್ಬಿಸಿ ನ್ಯೂಸ್ಗೆ ತಿಳಿಸಿದ್ದಾರೆ.

‘ಚಾನೆಲ್ 12’ ಸೇರಿದಂತೆ ಕೆಲವು ಇಸ್ರೇಲಿ ಮಾಧ್ಯಮಗಳು, ‘ಖಮೇನಿ ದಾಳಿಯಲ್ಲಿ ಸಾವನ್ನಪ್ಪಿರಬಹುದು ಅಥವಾ ಗಂಭೀರವಾಗಿ ಗಾಯಗೊಂಡಿರಬಹುದು’ ಎಂದು ವರದಿ ಮಾಡಿವೆ. ಆದರೆ, ಈ ಕುರಿತು ಅಮೆರಿಕ ಅಥವಾ ಇಸ್ರೇಲ್ ಸರ್ಕಾರಗಳಿಂದ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲ.

(ವಿವಿಧ ಏಜೆನ್ಸಿಗಳ ಮಾಹಿತಿ ಅಧರಿಸಿ ಬರೆದ ಸುದ್ದಿ)
.ಇರಾನ್ ಮೇಲೆ ಇಸ್ರೇಲ್, ಅಮೆರಿಕ ದಾಳಿ: ಪಶ್ಚಿಮ ಏಷ್ಯಾದಲ್ಲಿ ಸ್ಫೋಟಗಳದ್ದೇ ಸದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.