ಟೆಹರಾನ್: ಪರಮಾಣು ಒಪ್ಪಂದದ ಮಾತುಕತೆಗೆ ಸ್ಪಂದಿಸದ ಇರಾನ್ ಮೇಲೆ ಅಮೆರಿಕ–ಇಸ್ರೇಲ್ ಜಂಟಿಯಾಗಿ ದಾಳಿ ನಡೆಸಿದೆ. ಇಸ್ರೇಲ್ ರಾಜಧಾನಿ ಮತ್ತು ಪಶ್ಚಿಮ ಏಷ್ಯಾದಲ್ಲಿರುವ ಅಮೆರಿಕದ ವಾಯನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಪ್ರತೀಕಾರದ ದಾಳಿ ನಡೆಸಿದೆ.

ಇರಾನ್ನ 30ಕ್ಕೂ ಹೆಚ್ಚು ನಗರಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ರಾಜಧಾನಿ ಟೆಹರಾನ್ನ ಜಮ್ಹೂರಿ, ಯೂನಿವರ್ಸಿಟಿ ಸ್ಟ್ರೀಟ್ ಮತ್ತು ಉತ್ತರ ಭಾಗದ ಸೈಯದ್ ಖಂದಾನ್ ಪ್ರದೇಶ, ಅಣುಶಕ್ತಿ ಸಂಶೋಧನಾ ಕೇಂದ್ರವಿರುವ ಇಸ್ಫಹಾನ್ ಮತ್ತು ನಟಾಂಜ್, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್(ಐಆರ್ಜಿಸಿ) ಪ್ರಮುಖ ನೆಲೆಗಳು, ಬಂದರು ನಗರಿ ಬುಶೆಹರ್ ಸೇರಿದಂತೆ ಪ್ರಮುಖ ನಗರ ಮೇಲೆ ವೈಮಾನಿಕ ದಾಳಿ ನಡೆದಿದೆ.

ಇರಾನ್ ಪ್ರತೀಕಾರ:

ಇಸ್ರೇಲ್ ರಾಜಧಾನಿ ಟೆಲ್ ಅವೀವ್ ಅನ್ನು ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಅಲ್ಲದೇ ‘ಆಪರೇಷನ್ ಟ್ರೂ ಪ್ರಾಮಿಸ್ 4’ ಹೆಸರಿನಲ್ಲಿ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ಮೂಲಸೌಕರ್ಯ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಪ್ರತೀಕಾರದ ದಾಳಿ ನಡೆಸಿದೆ.

ಬಹ್ರೇನ್ನ ಮನಾಮಾದಲ್ಲಿರುವ ಅಮೆರಿಕ ನೌಕಾಪಡೆಯ ‘5ನೇ ಫ್ಲೀಟ್’ ಪ್ರಧಾನ ಕಚೇರಿ, ಯುನೈಟೆಡ್ ಅರಬ್ ಎಮಿರೇಟ್ಸ್ನ ಅಬುಧಾಬಿಯಲ್ಲಿರುವ ‘ಅಲ್ ದಫ್ರಾ’ ವಾಯುನೆಲೆ, ಕತಾರ್ನಲ್ಲಿರುವ ಅಮೆರಿಕದ ಅತಿದೊಡ್ಡ ವಾಯುನೆಲೆ ‘ಅಲ್ ಉದೈದ್’ ಮತ್ತು ಕುವೈತ್ನಲ್ಲಿರುವ ಅಲ್ ಸಾಲೆಮ್ ವಾಯುನೆಲೆಯನ್ನು ಗುರಿಯಾಗಿಸಿಕೊಂಡ ಇರಾನ್ ದಾಳಿ ನಡೆಸಿದೆ.

ಮಕ್ಕಳು ಸೇರಿ 40ಕ್ಕೂ ಹೆಚ್ಚು ಮಂದಿ ಸಾವು:

ಇರಾನ್ ರಾಜಧಾನಿ ಟೆಹರಾನ್ನ ಪೂರ್ವ ಭಾಗದಲ್ಲಿರುವ ಶಾಲೆಯೊಂದರ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಇರಾನ್ನ ‘ಮೆಹರ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದಕ್ಕೂ ಮೊದಲು, ಮಿನಾಬ್ ನಗರದಲ್ಲಿರುವ ಬಾಲಕಿಯರ ಶಾಲೆಯ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಮಕ್ಕಳು ಸೇರಿದಂತೆ 40 ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಮಾಧ್ಯಮಗಳು ವರದಿ ಮಾಡಿವೆ.

ರಷ್ಯಾ ಖಂಡನೆ:

ಇರಾನ್ ಮೇಲಿನ ದಾಳಿಯನ್ನು ಬಲವಾಗಿ ಖಂಡಿಸಿರುವ ರಷ್ಯಾ, ಅಂತರರಾಷ್ಟ್ರೀಯ ಕಾನೂನುಗಳನ್ನು ಅಮೆರಿಕ ಮತ್ತು ಇಸ್ರೇಲ್ ಉಲ್ಲಂಘಿಸಿವೆ ಎಂದು ಹೇಳಿದೆ.

(ವಿವಿಧ ಸುದ್ದಿ ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.