ವಾಷಿಂಗ್ಟನ್: ನಿಮ್ಮ ವಿರುದ್ಧದ ಪ್ರತೀಕಾರ ಮುಗಿದಿಲ್ಲ ಎಂದು ಅಫ್ಗಾನಿಸ್ತಾನದಲ್ಲಿರುವ ಐಸಿಸ್ ಖುರಾಸನ್ ಉಗ್ರರಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಖಡಕ್ ಸಂದೇಶ ರವಾನಿಸಿದ್ದಾರೆ.

ಓದಿ:ಅಫ್ಗನ್ನಿಂದ ಸೇನೆ ನಿರ್ಗಮನ ಸರಿಯಾದ ನಿರ್ಧಾರ: ಬೈಡನ್ ಸಮರ್ಥನೆ

‘ಅಫ್ಗಾನಿಸ್ತಾನ ಮತ್ತು ಇತರ ದೇಶಗಳಲ್ಲಿ ಭಯೋತ್ಪಾದನೆ ವಿರುದ್ಧದ ಹೋರಾಟವನ್ನು ನಾವು ಮುಂದುವರಿಸಲಿದ್ದೇವೆ. ಐಸಿಸ್ ಖುರಾಸನ್ ವಿರುದ್ಧದ ನಮ್ಮ ಹೋರಾಟವೂ ಮುಗಿದಿಲ್ಲ’ ಎಂದು ಬೈಡನ್ ಹೇಳಿದ್ದಾರೆ.

ಐಸಿಸ್ ಖುರಾಸನ್ ಉಗ್ರರು ಅಫ್ಗಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ನಡೆಸಿದ್ದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಅಮೆರಿಕದ 13 ಮಂದಿ ಯೋಧರು ಮತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಅಮೆರಿಕ ನಡೆಸಿದ್ದ ಡ್ರೋನ್ ದಾಳಿಯಲ್ಲಿ ಐಸಿಸ್ ಖುರಾಸನ್ ಘಟಕದ ಇಬ್ಬರು ಉಗ್ರರು ಹತರಾಗಿದ್ದರು.

ಓದಿ:ಅಫ್ಗಾನಿಸ್ತಾನದಲ್ಲಿ ಸಂಘರ್ಷ: ಯುದ್ಧವಿಮಾನ ಧ್ವಂಸಗೊಳಿಸಿದ ಅಮೆರಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.