ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾಗೆ ಮರಳಿದ ಅಲಿಬಾಬಾ ಸಂಸ್ಥಾಪಕ, ಖ್ಯಾತ ಉದ್ಯಮಿ ಜಾಕ್ ಮಾ

Last Updated 27 ಮಾರ್ಚ್ 2023, 16:30 IST
ಅಕ್ಷರ ಗಾತ್ರ

ಬೀಜಿಂಗ್: ಇ ಕಾಮರ್ಸ್‌ ದೈತ್ಯ ಸಂಸ್ಥೆ ಅಲಿಬಾಬಾ ಸಂಸ್ಥಾಪಕ, ಬಿಲಿಯನೇರ್ ಜಾಕ್ ಮಾ ಒಂದು ವರ್ಷದ ವಿದೇಶ ವಾಸದ ಬಳಿಕ ಚೀನಾಗೆ ಹಿಂದಿರುಗಿದ್ದಾರೆ.

58 ವರ್ಷದ ಮಾ, 1990ರಲ್ಲಿ ಸ್ಥಾಪಿಸಿದ ಅಲಿಬಾಬಾ, ಚೀನಾದ ಅತ್ಯಂತ ಶ್ರೀಮಂತ ಹಾಗೂ ಪ್ರಭಾವಿ ವ್ಯಾಪಾರ ಕಂಪನಿಯಾಗಿದೆ.

ಶಾಂಘೈನ ಸಾರ್ವಜನಿಕ ಸಭೆಯಲ್ಲಿ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರನ್ನು ಟೀಕಿಸಿದ ಬಳಿಕ ನವೆಂಬರ್ 2020ರಿಂದ ಭೂಗತರಾಗಿದ್ದರು. ಆಗೊಮ್ಮೆ ಈಗೊಮ್ಮೆ ಸಾರ್ವಜನಿಕವವಾಗಿ ಕಾಣಿಸಿಕೊಂಡು ಮರೆಯಾಗುತ್ತಿದ್ದರು. 2021ರ ಕೊನೆಯಲ್ಲಿ ಚೀನಾವನ್ನು ತೊರೆದಿದ್ದರು.

ಹಾಂಗ್‌ಷೌ ಯುಂಗುನಲ್ಲಿರುವ ತಮ್ಮ ಮಾಲೀಕತ್ವದ ಶಾಲೆಯಲ್ಲಿ ಸೋಮವಾರ ಮಾ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ದಕ್ಷಿಣ ಚೀನಾದ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ

ಅಧ್ಯಕ್ಷ ಷಿ ಜಿನ್‌ಪಿಂಗ್ ನೀಡಿದ ಭರವಸೆ ಮೇರೆಗೆ ಮಾ ದೇಶಕ್ಕೆ ಮರಳಿದ್ದಾರೆ ಎಂದು ವರದಿ ತಿಳಿಸಿದೆ.

ಕಳೆದ ಎರಡು ವರ್ಷಗಳಿಂದ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ನೇತೃತ್ವದ ಅಲ್ಲಿನ ಸರ್ಕಾರವು, ದೊಡ್ಡ ಉದ್ಯಮ ಸಂಸ್ಥೆಗಳ ವಿರುದ್ಧ ಏಕಸ್ವಾಮ್ಯ ವಿರೋಧಿ ಕ್ರಮಗಳನ್ನು ಕೈಗೊಂಡಿತ್ತು. ಇದರಿಂದ ಆತಂಕಕ್ಕೊಳಗಾಗಿದ್ದ ಹಲವು ಉದ್ಯಮಿಗಳು ಭದ್ರತಾ ಸಂಸ್ಥೆಗಳ ಕಣ್ತಪ್ಪಿಸಿ ಓಡಾಡಿಕೊಂಡಿದ್ದರು.

ಈ ಕುರಿತಂತೆ ಚೀನಾ ಸರ್ಕಾರವನ್ನು ಟೀಕಿಸಿದ್ದ ಮಾ, ದೇಶ ಬಿಟ್ಟು ತೆರಳಿದ್ದರು. ಬಳಿಕ, ಸ್ಪೇನ್, ನೆಂದರ್‌ಲೆಂಡ್ಸ್ ಸೇರಿದಂತೆ ಹಲವು ದೇಶಗಳಲ್ಲಿ ಕಾಣಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT