ಸಿಯೊಲ್ (ದಕ್ಷಿಣ ಕೊರಿಯಾ): ಮುಯಾನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ (ಇಂದು) ಬೆಳಗ್ಗೆ ಇಳಿಯುತ್ತಿದ್ದ 'ಜೆಜು ಏರ್' ವಿಮಾನ ಅಪಘಾತಕ್ಕೀಡಾಗಿದೆ. ದುರ್ಘಟನೆಯಲ್ಲಿ ಕನಿಷ್ಠ 120 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

'ಪ್ರತೀಕೂಲ ಹವಾಮಾನ ಹಾಗೂ ವಿಮಾನಕ್ಕೆ ಹಕ್ಕಿ ಬಡಿದಿರುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ. ಆದಾಗ್ಯೂ, ಜಂಟಿ ತನಿಖೆಯ ಬಳಿಕ ನಿಖರ ಕಾರಣ ಏನೆಂಬುದನ್ನು ಘೋಷಿಸಲಾಗುವುದು' ಎಂದು ಮುಯಾನ್ ಅಗ್ನಿಶಾಮಕ ದಳದ ಮುಖ್ಯಸ್ಥ ಲೀ ಜಿಯಾಂಗ್–ಹ್ಯೂನ್ ಪ್ರಕಟಿಸಿದ್ದಾರೆ.

ಲ್ಯಾಂಡ್ ಆಗುವ ವೇಳೆ ರನ್ವೇನಿಂದ ಜಾರಿದ ವಿಮಾನ, ವೇಗವಾಗಿ ಗೋಡೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತಕ್ಷಣವೇ ಹೊತ್ತಿ ಉರಿದಿದೆ.

ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ನಿಂದ ಬಂದ ಈ ವಿಮಾನದಲ್ಲಿ, 6 ಮಂದಿ ಸಿಬ್ಬಂದಿ, 175 ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಈ ಪೈಕಿ ಇಬ್ಬರನ್ನು ರಕ್ಷಿಸಲಾಗಿದೆ. ಉಳಿದ ಯಾರೊಬ್ಬರೂ ಬದುಕಿರುವ ಸಾಧ್ಯತೆ ಇಲ್ಲ ಎಂದು ವರದಿಯಾಗಿದೆ.
.ದಕ್ಷಿಣ ಕೊರಿಯಾ: ಲ್ಯಾಂಡಿಂಗ್ ವೇಳೆ ಗೋಡೆಗೆ ಡಿಕ್ಕಿಯಾದ ವಿಮಾನ; ಕನಿಷ್ಠ 120 ಸಾವು.ದ. ಕೊರಿಯಾ | ಲ್ಯಾಂಡಿಂಗ್ ವೇಳೆ ಅಪಘಾತ; ಹೊತ್ತಿ ಉರಿದ ವಿಮಾನದ ಭೀಕರ ಚಿತ್ರಗಳು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.