ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Israel Hamas War | ಗಾಜಾಕ್ಕೆ ಮಾನವೀಯ ನೆರವು ಹೆಚ್ಚಿಸಿ: ಆ್ಯಂಟನಿ ಬ್ಲಿಂಕೆನ್

Published 29 ಏಪ್ರಿಲ್ 2024, 13:05 IST
Last Updated 29 ಏಪ್ರಿಲ್ 2024, 13:05 IST
ಅಕ್ಷರ ಗಾತ್ರ

ರಿಯಾದ್‌: ‘ಮುತ್ತಿಗೆ ಹಾಕಿರುವ ಗಾಜಾ ಪಟ್ಟಿಗೆ ಮಾನವೀಯ ನೆರವಿನ ಹರಿವನ್ನು ಹೆಚ್ಚಿಸಲು ಇಸ್ರೇನ್‌ ಇನ್ನೂ ಹೆಚ್ಚಿನ ಕ್ರಮಕೈಗೊಳ್ಳಬೇಕು’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್‌ ಸೋಮವಾರ ಹೇಳಿದ್ದಾರೆ.

ಹಮಾಸ್‌–ಇಸ್ರೇಲ್‌ ನಡುವೆ ಯುದ್ಧ ಆರಂಭವಾದಾಗಿನಿಂದಲೂ ಈ ಪ್ರದೇಶಕ್ಕೆ ಏಳನೇ ಬಾರಿ ಭೇಟಿ ನೀಡುತ್ತಿರುವ ಬ್ಲಿಂಕನ್‌, ಈ ಬಾರಿಯ ತಮ್ಮ ಪ್ರವಾಸವನ್ನು ಇದೇ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ.

‘ಗಾಜಾದಲ್ಲಿನ ಮಾನವೀಯ ಮಹಾದುರಂತಕ್ಕೆ ಇತಿಶ್ರೀ ಹಾಡಲು ಇರುವ ಅತ್ಯುತ್ತಮ ಮಾರ್ಗ ಎಂದರೆ, ಹಮಾಸ್ ಬಂಡುಕೋರರು ಸೆರೆ ಹಿಡಿದು ಒತ್ತೆಯಾಳುಗಳನ್ನಾಗಿಟ್ಟುಕೊಂಡಿರುವ ಇಸ್ರೇಲ್‌ನವರನ್ನು ಬಿಡುಗಡೆ ಮಾಡಬೇಕು’ ಎಂದು ರಿಯಾದ್‌ನಲ್ಲಿ ಗಲ್ಫ್‌ ಸಹಕಾರ ಮಂಡಳಿಯ ವಿದೇಶಾಂಗ ಸಚಿವರೊಂದಿಗೆ ಮಾತನಾಡುವಾಗ ತಿಳಿಸಿರುವ ಬ್ಲಿಂಕನ್‌, ‘ಗಾಜಾದಲ್ಲಿನ ಪರಿಸ್ಥಿತಿ ಸುಧಾರಿಸುವುದು ಸಹ ಮುಖ್ಯವಾದುದು’ ಎಂದಿದ್ದಾರೆ.

‘ಗಾಜಾಪಟ್ಟಿಯಲ್ಲಿನ ಮಾನವೀಯ ಬಿಕ್ಕಟ್ಟನ್ನು ಬಗೆಹರಿಸಲು, ಸ್ಥಳೀಯರು ಅನುಭವಿಸುತ್ತಿರುವ ನೋವನ್ನು ನಿವಾರಿಸಲು ಹೆಚ್ಚು ಪರಿಣಾಮಕಾರಿಯಾದ ಮಾರ್ಗ ಎಂದರೆ ಕದನ ವಿರಾಮ ಹಾಗೂ ಒತ್ತೆಯಾಳುಗಳ ಬಿಡುಗಡೆ’ ಎಂದು ಹೇಳಿದ್ದಾರೆ.

‘ಆದರೆ, ಗಾಜಾದಲ್ಲಿನ ಜನರ ಅಗತ್ಯಗಳನ್ನು ಪೂರೈಸಲಿಕ್ಕಾಗಿ ನಾವು ಕದನ ವಿರಾಮಕ್ಕಾಗಿ ಕಾದು ಕೂರುವುದಿಲ್ಲ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ದೂರವಾಣಿ ಮೂಲಕ ಮಾತುಕತೆ ನಡೆಸಿ, ಒತ್ತಡ ಹಾಕಿದ್ದರಿಂದ ಪರಿಸ್ಥಿತಿ ಕೊಂಚ ಸುಧಾರಿಸಿದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT