ವಾಷಿಂಗ್‌ಟನ್: ಸಿರಿಯಾದಲ್ಲಿ ಅಮೆರಿಕ ವಿಶೇಷ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಮೃತಪಟ್ಟ ಇಸ್ಲಾಮಿಕ್ ಸ್ಟೇಟ್ ಉಗ್ರರ ನಾಯಕ ಅಬುಬಕರ್ ಅಲ್ ಬಾಗ್ದಾದಿಯ ಕಳೇಬರವನ್ನು ರಹಸ್ಯವಾಗಿ ಸಮುದ್ರದಲ್ಲಿ ಸಂಸ್ಕಾರ ಮಾಡಲಾಗಿದೆ ಎಂದು ಅಮೆರಿಕ ಸೇನೆಯ ಮುಖ್ಯ ಕಚೇರಿ ಪೆಂಟಗನ್ ತಿಳಿಸಿದೆ.

ಮೃತದೇಹವನ್ನು ಎಲ್ಲಿ ಮತ್ತು ಯಾವಾಗ ಸಂಸ್ಕಾರ ಮಾಡಲಾಯಿತು ಎಂಬ ಮಾಹಿತಿ ಲಭ್ಯವಾಗಿಲ್ಲ. 2011ರಲ್ಲಿ ಪಾಕಿಸ್ತಾನದ ಅಬೋಟಾಬಾದ್‌ನಲ್ಲಿಅಲ್‌ಖೈದಾ ನಾಯಕ ಒಸಮಾ ಬಿಲ್ ಲಾಡೆನ್ ಹತ್ಯೆಯ ನಂತರ ಅವನ ಕಳೇಬರವನ್ನು ಹೀಗೆಯೇ ಸಮುದ್ರದಲ್ಲಿ ಸಂಸ್ಕಾರ ಮಾಡಲಾಗಿತ್ತು ಎಂಬುದನ್ನು ಈ ಸಂದರ್ಭ ನೆನಪಿಸಿಕೊಳ್ಳಬಹುದು.

ಇದನ್ನೂ ಓದಿ:ಬಿನ್ ಲಾಡೆನ್ಗೆ ಸಮುದ್ರದಲ್ಲಿ ಶವಸಂಸ್ಕಾರ

‘ಬಾಗ್ದಾದಿಯ ಕಳೇಬರವನ್ನು ಸಮರ್ಪಕವಾಗಿ ವಿಲೇವಾರಿ ಮಾಡಿದ್ದೇವೆ. ಇನ್ನು ಅವನ ದೇಹಕ್ಕೆ ಸಂಬಂಧಿದಂತೆ ಮಾಡಬೇಕಾದ ಕೆಲಸ ಯಾವುದೂ ಉಳಿದಿಲ್ಲ. ಎಲ್ಲವನ್ನೂ ಸರಿಯಾಗಿ ನಿರ್ವಹಿಸಿದ್ದೇವೆ’ ಎಂದು ಅಮೆರಿಕ ಸೇನೆಯ ಮುಖ್ಯಸ್ಥ ಜನರಲ್ ಮಾರ್ಕ್ ಮಿಲ್ಲೆ ಹೇಳಿದ್ದಾರೆ.

‘ಅಂತ್ಯಸಂಸ್ಕಾರದ ವೇಳೆ ಅಮೆರಿಕ ಸೇನೆಯು ಶಸ್ತ್ರ ಸಂಘರ್ಷದ ವೇಳೆ ಅನುಸರಿಸುವ ಎಲ್ಲ ನಿಯಮಾವಳಿಗಳನ್ನು ಚಾಚುತಪ್ಪದೆ ಅನುಸರಿಸಲಾಗಿದೆ’ ಎಂದು ಮಿಲ್ಲೆ ಹೇಳಿದ್ದಾರೆ.

ಉತ್ತರ ಸಿರಿಯಾದಲ್ಲಿ ಅಮೆರಿಕ ಪಡೆಗಳು ಬಾಗ್ದಾದಿ ವಿರುದ್ಧಕ್ಷಿಪ್ರ ಕಾರ್ಯಾಚಾರಣೆ ನಡೆಸಿದ್ದವು. ಈ ಸಂದರ್ಭಬಾಗ್ದಾದಿ ತನ್ನನ್ನು ತಾನು ಸ್ಫೋಟಿಸಿಕೊಂಡು ಸಾವನ್ನಪ್ಪಿದ್ದ.

ಇದನ್ನೂ ಓದಿ:Explainer | ಐಎಸ್ ಸಂಘಟನೆ ಸ್ಥಾಪಕ ಬಾಗ್ದಾದಿ ಸಾವು: ಶಾಂತಿ ನೆಲೆಸೀತೆ ಜಗದಲ್ಲಿ?

‘ಅಮೆರಿಕ ಸೇನೆ ದಾಳಿ ಮಾಡುತ್ತಲೇ ಬಾಗ್ದಾದಿ ಭಯಭೀತಗೊಂಡ, ಅಳಲಾರಂಭಿಸಿದ, ಯೋಧರು ಆತನ ಬೆನ್ನು ಹತ್ತುತ್ತಲೇ ಆತ ಸುರಂಗವೊಂದಕ್ಕೆ ಓಡಿದ. ಅಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟಿಸಿಕೊಂಡು ಸತ್ತಿದ್ದಾನೆ. ಆತ್ಮಾಹುತಿ ಮಾಡಿಕೊಳ್ಳುವಾಗ ಆತ ತನ್ನ ಮೂವರು ಮಕ್ಕಳನ್ನು ಬಲಿಪಡೆದಿದ್ದಾನೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು.

‘ಆತ್ಮಾಹುತಿ ಬಾಂಬ್ ಸ್ಫೋಟಿಸಿಕೊಂಡ ಕಾರಣ ಬಾಗ್ದಾದಿ ದೇಹ ಛಿದ್ರಗೊಂಡಿತು. ಆದರೆ, ದೇಹದ ಭಾಗಗಳ ಪರೀಕ್ಷೆ ನಡೆಸಿದಾಗ ಆತ ಬಾಗ್ದಾದಿ ಎಂದು ದೃಢಪಟ್ಟಿದೆ.ಜಗತ್ತನ್ನು ಬೆದರಿಸಲು ಪ್ರಯತ್ನಿಸುತ್ತಿದ್ದ ಕೊಲೆಗಡುಕ ತನ್ನ ಕೊನೆ ಕ್ಷಣಗಳನ್ನು ಅತ್ಯಂತ ಭಯದಿಂದ ಕಳೆದ. ಆತ ಸಂಪೂರ್ಣ ಆತಂಕಗೊಂಡಿದ್ದ. ಅಮೆರಿಕ ಸೇನೆಯನ್ನು ಕಂಡು ನಡುಗುತ್ತಿದ್ದ’ ಎಂದೂ ಡೊನಾಲ್ಡ್ ಟ್ರಂಪ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.

ಇನ್ನಷ್ಟು...

ಬಗ್ದಾದಿ ಅಂತ್ಯ: ಉಡುಗೀತೇ ಐ.ಎಸ್. ಸಂಘಟನೆ?

ಮಹಿಳೆಯರ ಜನನಾಂಗ ಛೇದನಸಂಪ್ರದಾಯ ಹೇರಿದ್ದ ಬಾಗ್ದಾದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.