ಲಂಡನ್: ಹಂಗೇರಿ– ಬ್ರಿಟನ್ ಲೇಖಕ ಡೇವಿಡ್ ಝಲೈ ಅವರ ‘ಫ್ಲೆಷ್’ ಕಾದಂಬರಿಗೆ 2025ರ ಪ್ರತಿಷ್ಠಿತ ‘ಬುಕರ್ ಪ್ರಶಸ್ತಿ’ ಸಂದಿದೆ.

ಭಾರತೀಯ ಲೇಖಕಿ ಕಿರಣ್ ದೇಸಾಯಿ ಅವರ ‘ದಿ ಲೋನ್ಲಿನೆಸ್ ಆಫ್ ಸೊನಿಯಾ ಆ್ಯಂಡ್ ಸನ್ನಿ’ ಕಾದಂಬರಿ ಸೇರಿದಂತೆ ಆರು ಲೇಖಕರ ಕೃತಿಗಳು ಬುಕರ್ ಪ್ರಶಸ್ತಿ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿದ್ದವು.

ಲಂಡನ್ನ ಬಿಲ್ಲಿಂಗ್ಸ್ಗೇಟ್ನಲ್ಲಿ ಸೋಮವಾರ ರಾತ್ರಿ ನಡೆದ ಸಮಾರಂಭದಲ್ಲಿ ಕಳೆದ ವರ್ಷದ ಬುಕರ್ ಪ್ರಶಸ್ತಿ ವಿಜೇತೆ ಸಂತಾ ಹಾರ್ವಿ ಅವರು ಡೇವಿಡ್ ಝಲೈ ಅವರಿಗೆ ಪಾರಿತೋಷಕವನ್ನು ನೀಡಿದರು. ಈ ಪ್ರಶಸ್ತಿಯು ಪಾರಿತೋಷಕದ ಜೊತೆಗೆ ₹50 ಸಾವಿರ ಪೌಂಡ್ (₹58.25 ಲಕ್ಷ) ನಗದನ್ನೂ ಒಳಗೊಂಡಿದೆ.

ಒಂದು ವೇಳೆ ಕಿರಣ್ ದೇಸಾಯಿ ಅವರಿಗೆ ಈ ಪ್ರಶಸ್ತಿ ದೊರೆತಿದ್ದರೆ, 56 ವರ್ಷದ ಬುಕರ್ ಪ್ರಶಸ್ತಿಯ ಇತಿಹಾಸದಲ್ಲಿ ಎರಡು ಬಾರಿ ಪ್ರಶಸ್ತಿ ಗೆದ್ದ ಐದನೇ ವ್ಯಕ್ತಿ ಎನ್ನುವ ಗೌರವಕ್ಕೆ ಪಾತ್ರರಾಗುತ್ತಿದ್ದರು. 2006ರಲ್ಲಿ ದೇಸಾಯಿ ಅವರ ‘ದಿ ಇನ್ಹೆರಿಟೆನ್ಸ್ ಆಫ್ ಲಾಸ್’ ಕೃತಿಗೆ ಬುಕರ್ ಪ್ರಶಸ್ತಿ ಲಭಿಸಿತ್ತು.

ಪ್ರಶಸ್ತಿಗೆ ಆಯ್ಕೆಯಾಗಿರುವ ‘ಫ್ಲೆಷ್’ ಕೃತಿಯಲ್ಲಿನ ಏಕ ವ್ಯಕ್ತಿಯ ಕಥೆ ವಿಶೇಷವಾಗಿ ಇಷ್ಟವಾಯಿತು. ಇದು ಇತರೆ ಕೃತಿಗಳಂತಲ್ಲ. ಇದೊಂದು 'ಕರಾಳ ಕೃತಿ’(ಡಾರ್ಕ್ ಬುಕ್) ಎಂದು ಎನ್ನಿಸಿದರೂ, ನಾವೆಲ್ಲ ಓದಿ ಆನಂದಿಸಿದೆವು’ ಎಂದು 2025ರ ಬುಕರ್ ಪ್ರಶಸ್ತಿಯ ತೀರ್ಪುಗಾರರಲ್ಲೊಬ್ಬರಾದ ಐರಿಷ್ ಕಾದಂಬರಿಕಾರ ರೊಡ್ಡಿ ಡೊಯ್ಲೆ ಹೇಳಿದರು.

ಬುಕರ್ ಪ್ರಶಸ್ತಿಯ ಅಂತಿಮ ಸುತ್ತಿನಲ್ಲಿ ಅಮೆರಿಕನ್ ಕೊರಿಯನ್ ಲೇಖಕಿ ಸುಸಾನ್ ಚೋಯ್ ಅವರ ‘ಫ್ಲಾಶ್ ಲೈಟ್’ ಅಮೆರಿಕನ್ ಜಪಾನೀಸ್ ಲೇಖಕಿ ಕೇಟಿ ಕಿಟಮುರಾ ಅವರ ‘ಆಡಿಷನ್’, ಬ್ರಿಟಿಷ್ ಅಮೆರಿಕನ್ ಲೇಖಕಿ ಬೆನ್ ಮಾರ್ಕೊವಿಟ್ಸ್ ಅವರ ‘ದಿ ರೆಸ್ಟ್ ಆಫ್ ಅವರ್ ಲೈವ್ಸ್’ ಮತ್ತು ಇಂಗ್ಲಿಷ್ ಕಾದಂಬರಿಕಾರ ಆಂಡ್ರ್ಯೂ ಮಿಲ್ಲರ್ ಅವರ ‘ದಿ ಲ್ಯಾಂಡ್ ಇನ್ ವಿಂಟರ್’ ಕೃತಿಗಳು ಇದ್ದವು. ಅಂತಿಮ ಸುತ್ತಿಗೆ ಆಯ್ಕೆಯಾದ ಎಲ್ಲ ಕೃತಿಗಳ ಲೇಖಕರಿಗೆ 2,500 ಪೌಂಡ್ ಮತ್ತು ಅವರ ಕೃತಿಗಳ ವಿಶೇಷ ಆವೃತ್ತಿಯನ್ನು ನೀಡಲಾಗುತ್ತದೆ.
.ಕನ್ನಡದ ವಿಮರ್ಶೆಯ ಆತ್ಮವಿಮರ್ಶೆಗೆ ಬೂಕರ್ ಪ್ರಶಸ್ತಿ ಪ್ರೇರಣೆಯಾಗಲಿ: ಬರಗೂರು.ಬಾನು ಮುಷ್ತಾಕ್ ಕೃತಿಗೆ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ: ಪ್ರಮುಖರ ಅಭಿಪ್ರಾಯಗಳು.ಕನ್ನಡಕ್ಕೆ ಬೂಕರ್ ಗರಿ: ಎಂದಿಗೂ ಆರದ ಹೋರಾಟದ ಕಿಚ್ಚು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.