ರಿಯೋ–ಡಿ–ಜನೈರೋ: ಕೃತಕ ಬುದ್ಧಿಮತ್ತೆಯ (ಎ.ಐ)) ಅನಧಿಕೃತ ಬಳಕೆಯ ವಿರುದ್ಧ ರಕ್ಷಣೆ ಹಾಗೂ ಅತಿಯಾದ ದತ್ತಾಂಶ ಸಂಗ್ರಹ ತಪ್ಪಿಸಿ, ನ್ಯಾಯಯುತವಾದ ಪಾವತಿ ಕಾರ್ಯವಿಧಾನ ಅಳವಡಿಸಿಕೊಳ್ಳಲು ‘ಬ್ರಿಕ್ಸ್’ ಸದಸ್ಯ ರಾಷ್ಟ್ರಗಳ ನಾಯಕರು ಕರೆ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಭಾನುವಾರ ಇಲ್ಲಿ ಆರಂಭಗೊಂಡಿರುವ ಎರಡು ದಿನಗಳ ಬ್ರಿಕ್ ಶೃಂಗಸಭೆಯಲ್ಲಿ ಎ.ಐ ಚರ್ಚೆಗೆ ಸಮಯ ನಿಗದಿಪಡಿಸಿದೆ. ಅಭಿವೃದ್ಧಿ ಹೊಂದಿದ ದೇಶಗಳ ಬೃಹತ್ ಟೆಕ್ ಸಂಸ್ಥೆಗಳು ಎ.ಐ ಮಾದರಿಗಳಿಗೆ ತರಬೇತಿ ನೀಡಲು ಬಳಸುವ ವಸ್ತುಗಳಿಗೆ ಹಕ್ಕುಸ್ವಾಮ್ಯ ಶುಲ್ಕ ವಿಧಿಸಲು ವಿರೋಧ ವ್ಯಕ್ತಪಡಿಸುತ್ತಿವೆ. ಈ ಕುರಿತು ಚರ್ಚೆ ನಡೆಸಲು ಸದಸ್ಯರಾಷ್ಟ್ರಗಳು ನಿರ್ಧರಿಸಿವೆ.

ಪ್ರಧಾನಿ ಮೋದಿ ಭಾಗಿ: 17ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸುವ ನಾಲ್ಕು ದಿನಗಳ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬ್ರೆಜಿಲ್ನ ರಿಯೋ ಡಿ ಜನೈರೊಗೆ ಬಂದಿಳಿದರು.

ಶನಿವಾರ ಗೆಲಿಯೊ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು.

‘ರಿಯೋ ಡಿ ಜನೈರೊಗೆ ಬಂದಿಳಿದ್ದೇನೆ. ಅಧ್ಯಕ್ಷ ಲುಲಾ ಅವರ ಆಹ್ವಾನದ ಮೇರೆಗೆ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದು, ಫಲಪ್ರದ ಮಾತುಕತೆ ನಡೆಯುವ ವಿಶ್ವಾಸವಿದೆ’ ಎಂದು ಪ್ರಧಾನಿ ಮೋದಿ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.