ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈ 4ರಂದು ಬ್ರಿಟನ್ ಸಾರ್ವತ್ರಿಕ ಚುನಾವಣೆ: ಪ್ರಧಾನಿ ರಿಷಿ ಸುನಕ್ ಘೋಷಣೆ

Published 23 ಮೇ 2024, 5:42 IST
Last Updated 23 ಮೇ 2024, 5:42 IST
ಅಕ್ಷರ ಗಾತ್ರ

ಲಂಡನ್‌: ದೇಶದ ಸಾರ್ವತ್ರಿಕ ಚುನಾವಣೆಯು ಜುಲೈ 4ರಂದು ನಡೆಯಲಿದೆ ಎಂದು ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಘೋಷಿಸಿದ್ದಾರೆ.

ಭಾರತ ಮೂಲದ ಮೊದಲ ಪ್ರಧಾನಿಯಾಗಿರುವ ರಿಷಿ, ಚುನಾವಣೆ ಕುರಿತು ರಾಜಕುಮಾರ 3ನೇ ಚಾರ್ಲ್ಸ್‌ ಅವರಿಗೆ ಔಪಚಾರಿಕವಾಗಿ ಮಾಹಿತಿ ನೀಡಲಾಗಿದೆ. ಸಂಸತನ್ನು ಶೀಘ್ರವೇ ವಿಸರ್ಜಿಸಲಾಗುವುದು ಎಂದು ತಿಳಿಸಿದ್ದಾರೆ.

ಲಂಡನ್‌ನ 'ಡೌನಿಂಗ್‌ ಸ್ಟ್ರೀಟ್‌'ನಲ್ಲಿ ಬುಧವಾರ ನಡೆದ ಕ್ಯಾಬಿನೆಟ್‌ ಸಭೆ ಬಳಿಕ ಮಾತನಾಡಿದ 44 ವರ್ಷದ ರಿಷಿ, ತಮ್ಮ ಆಡಳಿತದ ಸಾಧನೆಗಳನ್ನು ಜನರೆದುರು ತೆರೆದಿಟ್ಟಿದ್ದಾರೆ. ಅದೇ ವೇಳೆ ಅವರು, 'ನನ್ನ ಅಧಿಕಾರಾವಧಿಯಲ್ಲಿ ನಿಮಗೆ (ಜನರಿಗೆ) ಸೂಕ್ತ ರಕ್ಷಣೆ ನೀಡಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇನೆ. ಇದೇ ನನ್ನ ವಾಗ್ದಾನ.. ಬ್ರಿಟನ್‌ ಜನರು ತಮ್ಮ ಭವಿಷ್ಯವನ್ನು ಆ‌ಯ್ಕೆ ಮಾಡಿಕೊಳ್ಳುವ ಸಮಯ ಇದಾಗಿದೆ' ಎಂದಿದ್ದಾರೆ.

ಇತ್ತೀಚೆಗೆ ನಡೆದ ಉಪ ಚುನಾವಣೆಗಳು ಹಾಗೂ ಸ್ಥಳೀಯ ಚುನಾವಣೆಗಳಲ್ಲಿ ಮುನ್ನಡೆ ಕಾಯ್ದುಕೊಂಡಿರುವ ವಿರೋಧ ಪಕ್ಷ ಲೇಬರ್‌ ಪಾರ್ಟಿ, ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿಯೂ ಗೆಲುವು ಸಾಧಿಸುವ ಸಾಧ್ಯತೆ ಇದೆ. ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷವು ಹಿನ್ನಡೆ ಅನುಭವಿಸಬಹುದು ಎಂದು ಸಮೀಕ್ಷೆಗಳು ಹೇಳಿವೆ. ಇದರ ಬೆನ್ನಲ್ಲೇ ಚುನಾವಣೆ ಘೋಷಣೆಯಾಗಿದೆ.

'ಯಾವಾಗಬೇಕಾದರೂ ಚುನಾವಣೆ ಎದುರಿಸಲು ಸಿದ್ಧರಾಗಿದ್ದೇವೆ. ಚುನಾವಣೆ ನಡೆಯಬೇಕು ಎಂಬುದು ದೇಶದ ಕೂಗಾಗಿದೆ' ಎಂದು ಲೇಬರ್‌ ಪಕ್ಷದ ವಕ್ತಾರರು ಹೇಳಿದ್ದಾರೆ.

ಬ್ರಿಟನ್‌ ಸಾರ್ವತ್ರಿಕ ಚುನಾವಣೆ ಕುರಿತು ಸಾಕಷ್ಟು ಊಹಾಪೋಹಗಳು ಎದ್ದಿದ್ದವು.

ಸ್ಥಳೀಯ ಚುನಾವಣೆ ಫಲಿತಾಂಶದ ಕುರಿತು ಇದೇ ತಿಂಗಳ ಆರಂಭದಲ್ಲಿ ಮಾತನಾಡಿದ್ದ ಸುನಕ್‌, ವಿರೋಧ ಪಕ್ಷ ಲೇಬರ್ ಪಾರ್ಟಿ ಗಳಿಸಿರುವ ಸ್ಥಾನಗಳನ್ನು ವಿಶ್ಲೇಷಿಸಿದರೆ, ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ಪಕ್ಷವು ಬಹುಮತ ಪಡೆಯದಂತಹ ಸ್ಥಿತಿ ಉದ್ಭವವಾಗಬಹುದು ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT