ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ವಿದ್ಯಾರ್ಥಿಗಳು ಗಣಿತ ಓದಲಿ: ಸುನಕ್‌ ಒಲವು

Last Updated 4 ಜನವರಿ 2023, 15:31 IST
ಅಕ್ಷರ ಗಾತ್ರ

ಲಂಡನ್‌(ಪಿಟಿಐ): 18 ವರ್ಷ ತುಂಬುವವರೆಗೂ ಎಲ್ಲ ವಿದ್ಯಾರ್ಥಿಗಳು ಗಣಿತ ಓದುವ ಕುರಿತು ಪ್ರಧಾನಿ ರಿಷಿ ಸುನಕ್ ಅವರು ಯೋಜನೆಯನ್ನು ರೂಪಿಸಲು ಬಯಸಿದ್ದಾರೆ ಎಂದು ಮಾಧ್ಯಮಗಳು ಬುಧವಾರ ವರದಿ ಮಾಡಿವೆ.

ಸುನಕ್‌ ಅವರ 2023ರ ಮೊದಲ ಭಾಷಣವನ್ನು ಪತ್ರಕರ್ತರಿಗೆ ಸಂಕ್ಷಿಪ್ತವಾಗಿ ವಿವರಿಸಲಾಯಿತು. ‘ಸಂಖ್ಯಾಶಾಸ್ತ್ರದ ಕುರಿತು ದೇಶವು ಮರುಚಿಂತನೆ ನಡೆಸಬೇಕು ಎಂದು ಸುನಕ್‌ ಅವರು ತಮ್ಮ ಭಾಷಣದಲ್ಲಿ ಹೇಳಲಿದ್ದಾರೆ’ ಎಂದು ಬಿಬಿಸಿ ವರದಿ ಮಾಡಿದೆ.

‘ಇಂದಿನ ಜಗತ್ತಿನಲ್ಲಿ ದತ್ತಾಂಶವೇ ಎಲ್ಲವೂ ಆಗಿದೆ. ಎಲ್ಲ ಉದ್ಯೋಗವು ದತ್ತಾಂಶವನ್ನು ಆಧರಿಸಿವೆ. ಆದ್ದರಿಂದ ಈ ಹಿಂದಿಗಿಂತಲೂ ವಿಶ್ಲೇಷಣಾತ್ಮಕ ಕೌಶಲವು ನಮ್ಮ ಮಕ್ಕಳಿಗೆ ಈಗ ಹೆಚ್ಚು ಅಗತ್ಯವಾಗಿದೆ’ ಎಂದು ಸುನಕ್‌ ಅವರು ಹೇಳಲಿದ್ದಾರೆ. ಬ್ರಿಟನ್‌ನಲ್ಲಿ 16ರಿಂದ 19 ವರ್ಷದೊಳಗಿನ ಅರ್ಧದಷ್ಟು ಮಕ್ಕಳು ಮಾತ್ರ ಗಣಿತ ಓದುತ್ತಾರೆ ಎಂದು ಸುನಕ್‌ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT