‘ದುರಂತ: ಟ್ರಂಪ್ ರಾಜಕೀಯ’
‘ಹವಾಮಾನ ಬದಲಾವಣೆಯಿಂದಾಗಿ ಇಂಥದ್ದೊಂದು ಪ್ರಾಕೃತಿಕ ದುರಂತ ಸಂಭವಿಸುತ್ತಿದೆ’ ಎಂದು ಹವಾಮಾನ ತಜ್ಞರು ಹೇಳುತ್ತಿದ್ದಾರೆ. ಕಾಳ್ಗಿಚ್ಚು ಆರಂಭಗೊಂಡದ್ದು ಹೇಗೆ ಎನ್ನುವ ಬಗ್ಗೆ ಅಮೆರಿಕದಲ್ಲಿ ತಜ್ಞರ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ‘ವೇಗವಾಗಿ ಗಾಳಿ ಬೀಸುತ್ತಿತ್ತು. ವಿದ್ಯುತ್ ತಂತಿಗಳು ತಾಗಿ ಕಿಡಿ ಹೊತ್ತಿಕೊಂಡಿರಬಹುದು’ ಎಂದು ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಗಳು ಅಂದಾಜಿಸುತ್ತಿದ್ದಾರೆ. ಇನ್ನೊಂದು ಕಡೆ, ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಪೋಸ್ಟ್ ಹಂಚಿಕೊಂಡಿದ್ದು, ‘ಅಸಮರ್ಥ ಗವರ್ನರ್‌ನಿಂದ ಸಬೂಬುಗಳನ್ನು ಕೇಳಲು ಸಾಧ್ಯವಿಲ್ಲ. ಇದಕ್ಕೆಲ್ಲಾ ಕಾಲ ಮಿಂಚಿ ಹೋಗಿದೆ’ ಎಂದಿದ್ದಾರೆ. ‘ದುರಂತದ ಸಂದರ್ಭದಲ್ಲಿ ಟ್ರಂಪ್ ಅವರು ಸಹಾನುಭೂತಿ ವ್ಯಕ್ತಪಡಿಸುವ ಬದಲು ಕ್ಯಾಲಿಫೋರ್ನಿಯಾದ ಗವರ್ನರ್ ಡೆಮಾಕ್ರಟಿಕ್ ಪಕ್ಷದ ಗ್ಯಾವನ್ ನ್ಯೂಸಂ ಅವರ ವಿರುದ್ಧ ರಾಜಕೀಯ ಹೇಳಿಕೆ ನೀಡುತ್ತಿದ್ದಾರೆ’ ಎಂಬ ಚರ್ಚೆ ಆರಂಭವಾಗಿದೆ.