ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಗದು ಕೊರತೆ: ಮಧ್ಯ ಪ್ರಾಚ್ಯ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಮುಂದಾದ ಪಾಕಿಸ್ತಾನ

Published 23 ಆಗಸ್ಟ್ 2024, 11:36 IST
Last Updated 23 ಆಗಸ್ಟ್ 2024, 11:36 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ನಗದು ಕೊರತೆ ಎದುರಿಸುತ್ತಿರುವ ಪಾಕಿಸ್ತಾನ, ಅಂದಾಜು 4 ಬಿಲಿಯನ್‌ ಡಾಲರ್‌ (ಅಂದಾಜು ₹ 33,560 ಕೋಟಿ) ಸಾಲ ಪಡೆಯಲು ಮಧ್ಯ ಪ್ರಾಚ್ಯ ಬ್ಯಾಂಕ್‌ಗಳೊಂದಿಗೆ ಮಾತುಕತೆ ಆರಂಭಿಸಿದೆ.

₹ 50 ಸಾವಿರ ಕೋಟಿ ನೆರವು ಒದಗಿಸುವಂತೆ ಮಾಡಿರುವ ಮನವಿಗೆ ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಅನುಮೋದನೆ ಬಾಕಿ ಇದೆ. ಇದರ ನಡುವೆ ಮಧ್ಯ ಪ್ರಾಚ್ಯ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಪಾಕ್ ಮುಂದಾಗಿದೆ.

ಹಣಕಾಸು ಸಚಿವ ಮುಹಮ್ಮದ್‌ ಔರಂಗಜೇಬ್ ಮತ್ತು ಅವರ ತಂಡ 'ದುಬೈ ಇಸ್ಲಾಮಿಕ್ ಬ್ಯಾಂಕ್‌' ಸಮೂಹದ ಸಿಇಒ ಡಾ. ಅದ್ನಾನ್‌ ಚಿಲ್ವಾನ್‌ ಅವರೊಂದಿಗೆ ಗುರುವಾರ ವರ್ಚುವಲ್‌ ಆಗಿ ಸಭೆ ನಡೆಸಿದ್ದಾರೆ ಎಂದು 'ಡಾನ್‌' ಪತ್ರಿಕೆ ವರದಿ ಮಾಡಿದೆ.

'ಮಷ್ರೆಕ್‌ ಬ್ಯಾಂಕ್‌' ಅಧ್ಯಕ್ಷ ಅಹ್ಮದ್‌ ಅಬ್ದೆಲಾಲ್‌ ಅವರೊಂದಿಗೆ ಬುಧವಾರ ಇದೇ ರೀತಿಯ ಮಾತುಕತೆ ನಡೆಸಲಾಗಿದೆ.

'ಆರ್ಥಿಕ ದೃಷ್ಟಿಕೋನ ಮತ್ತು ಪಾಕಿಸ್ತಾನದಲ್ಲಿ ಹೂಡಿಕೆ ಅವಕಾಶ'ಗಳ ಕುರಿತಂತೆ ಎರಡೂ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT