ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ವಿರುದ್ಧ ಗಡಿ ಸಂಘರ್ಷ, ಸತ್ತ ಚೀನಾ ಯೋಧರ ಬಗ್ಗೆ ಬರೆದ ಬ್ಲಾಗರ್‌ಗೆ ಜೈಲು

Last Updated 1 ಜೂನ್ 2021, 8:54 IST
ಅಕ್ಷರ ಗಾತ್ರ

ಕಳೆದ ವರ್ಷ ಗಾಲ್ವನ್‌ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಸಂಭವಿಸಿದ ಸಂಘರ್ಷದಲ್ಲಿ, ಸತ್ತವರ ಸಂಖ್ಯೆ ಚೀನಾದ ಅಧಿಕೃತ ಸಂಖ್ಯೆಗಿಂತ ಹೆಚ್ಚಿದೆ ಎಂದು ಪೋಸ್ಟ್‌ ಮಾಡಿದ್ದ ಚೀನಾದ ಖ್ಯಾತ ಬ್ಲಾಗರ್‌ ಕ್ಯೂ ಜಿಮಿಂಗ್‌ ಅವರಿಗೆ 8 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ.

ನ್ಯಾನ್‌ಜಿಂಗ್‌ ನಗರದ ಕೋರ್ಟ್‌ ಮಂಗಳವಾರ ಜಿಮಿಂಗ್‌ ಅವರಿಗೆ ಹುತಾತ್ಮ ಸೈನಿಕರಿಗೆ ಅವಮಾನ ಮಾಡಿದ ಆಪಾದನೆಯಡಿ ಮಂಗಳವಾರ ಶಿಕ್ಷೆ ನೀಡಿದೆ. ಚೀನಾ ನೂತನ ಅಪರಾಧ ಕಾನೂನು ತಂದಿದ್ದು, ಸೈನಿಕರಿಗೆ ಮತ್ತು ಸಾಹಸಿಗಳಿಗೆ ಅವಮಾನಿಸುವಂತಹ ಹೇಳಿಕೆ ಅಥವಾ ಬರಹಗಳನ್ನು ಪ್ರಕಟಿಸುವುದನ್ನು ನಿಷೇಧಿಸಲಾಗಿದೆ.

ಹೊಸ ಕಾನೂನು ಜಾರಿಯಾದ ಬಳಿಕ ಸೈನಿಕರಿಗೆ ಅವಮಾನ ಮಾಡಲಾಗಿದೆ ಎಂಬ ಕಾರಣಕ್ಕೆ ಜೈಲು ಸೇರಿದ ಮೊದಲಿಗ ಎಂದು ಜಿಮಿಂಗ್‌ ಗುರುತಿಸಿಕೊಂಡಿದ್ದಾರೆ.

ಟ್ವಿಟರ್‌ನಂತಹ ಸಾಮಾಜಿಕ ತಾಣ ವೆಬೊನಲ್ಲಿ 25 ಕೋಟಿ ಫಾಲೋವರ್‌ಗಳನ್ನು ಹೊಂದಿರುವ ಜಿಮಿಂಗ್‌, ಕಳೆದ ಜೂನ್‌ ತಿಂಗಳಲ್ಲಿ ಸ್ಕಿರ್ಮಿಶ್‌ನಲ್ಲಿ ಭಾರತೀಯ ಸೈನಿಕರೊಂದಿಗೆ ನಡೆದ ಕಾಳಗದಲ್ಲಿ ಚೀನಾದ ಅಧಿಕೃತ ಮಾಹಿತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಚೀನಿ ಸೈನಿಕರು ಸತ್ತಿದ್ದಾರೆ ಎಂದು ಪೋಸ್ಟ್‌ ಮಾಡಿದ್ದರು.

ಸಂಘರ್ಷದಲ್ಲಿ ಬದುಕುಳಿದ ಚೀನಾ ಅಧಿಕಾರಿಯ ಬಗ್ಗೆ, ''ಅವರು ಉನ್ನತ ಹುದ್ದೆಯಲ್ಲಿದ್ದ ಕಾರಣಕ್ಕೆ ಬದುಕುಳಿದಿದ್ದಾರೆ'' ಎಂದು ಜಿಮಿಂಗ್‌ ಕಮೆಂಟ್‌ ಮಾಡಿದ್ದರು. ಇದು ಚೀನಾ ಸರ್ಕಾರಕ್ಕೆ ಸಹಿಸಲಸಾಧ್ಯವಾಗ ಟೀಕೆಯಾಗಿ ಪರಿಣಮಿಸಿತ್ತು.

38 ವರ್ಷದ ಜಿಮಿಂಗ್‌ ಅವರನ್ನು ಕಳೆದ ಫೆಬ್ರವರಿಯಲ್ಲಿ ಬಂಧಿಸಿ, ಅವರ ಸಾಮಾಜಿಕ ಪುಟ ಕ್ರಯಾನ್‌ ಬಾಲ್‌ಗೆ ನಿಷೇದ ಹೇರಿದ್ದರು. ಕೋರ್ಟ್‌ನಲ್ಲಿ ಚೀನಾದ ನೂತನ ಕಾನೂನಿಗೆ ವಿರುದ್ಧವಾಗಿ ಮಾಡಲಾದ ಪೋಸ್ಟ್‌ ತನ್ನದೆಂದು ಜಿಮಿಂಗ್‌ ಒಪ್ಪಿಕೊಂಡಿದ್ದರು.

ಘರ್ಷಣೆ ನಡೆದ ಒಂದು ತಿಂಗಳ ಬಳಿಕ ಸಂಘರ್ಷದಲ್ಲಿ ನಾಲ್ವರು ಚೀನಿ ಸೈನಿಕರು ಹುತಾತ್ಮರಾಗಿರುವುದಾಗಿ ಚೀನಾ ಸರ್ಕಾರ ಹೇಳಿಕೊಂಡಿತ್ತು. ಅವರನ್ನು ಗಡಿ ಸಂರಕ್ಷಿಸಿದ ಹೀರೋಗಳು ಎಂದು ಕರೆದಿತ್ತು.

2018ರಲ್ಲಿ ಬೀಜಿಂಗ್‌ ಸರ್ಕಾರ, ಕಮ್ಯೂನಿಸ್ಟ್‌ ಪಾರ್ಟಿಯ ನೇತಾರರು ಮತ್ತು ಆಧುನಿಕ ಕಾಲದ ಸಾಹಸಿ ಯೋಧರನ್ನು ಅವಮಾನಿಸುವುದನ್ನು ನಿಷೇಧಿಸಿ ನೂತನ ಕಾನೂನು ನೀತಿಯನ್ನು ಮಂಡಿಸಿತ್ತು. ಈ ವರ್ಷ ಫೆಬ್ರವರಿ ತಿಂಗಳಲ್ಲಿ ನೂತನ ಕಾಯ್ದೆಯನ್ನು ಅಂಗೀಕರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT