ಬೀಜಿಂಗ್: 132 ಮಂದಿ ಪ್ರಯಾಣಿಸುತ್ತಿದ್ದ ಚೀನಾ ಈಸ್ಟರ್ನ್ ಏರ್‌ಲೈನ್ಸ್‌ನ ವಿಮಾನವು ಸುಮಾರು 29,000 ಅಡಿ ಮೇಲಿನಿಂದ ಏಕಾಏಕಿ ಕೆಳಗೆ ಬಿದ್ದಿರುವುದಾಗಿ ತಜ್ಞರು ಹೇಳಿದ್ದಾರೆ ಎಂದು 'ಬ್ಲೂಮ್‌ಬರ್ಗ್' ವರದಿ ಮಾಡಿದೆ.

ಚೀನಾ ವಿಮಾನವು ಪತನಗೊಳ್ಳಲು ಕಾರಣವೇನು ಎಂದು ತನಿಖೆ ನಡೆಸಲಾಗುತ್ತಿದ್ದು, ಈ ವೇಳೆ ವಿಮಾನವು ಸುಮಾರು ನೂರು ಮೈಲಿ (160.93 ಕಿ.ಮೀ.) ಎತ್ತರದಿಂದ ಬಿದ್ದಿದೆ ಎನ್ನಲಾಗಿದೆ.

ಸುಮಾರು ದಶಕಗಳಿಗೂಹೆಚ್ಚಿನ ಅವಧಿಯಲ್ಲಿ ಚೀನಾದಲ್ಲಿ ಸಂಭವಿಸಿದ ದೊಡ್ಡ ವಿಮಾನ ದುರಂತ ಇದಾಗಿದೆ. ಬೋಯಿಂಗ್ 737-800 ವಿಮಾನವು ದಕ್ಷಿಣ ಚೀನಾದ ಪರ್ವತ ಪ್ರದೇಶದಲ್ಲಿ ಸೋಮವಾರ ಪತನಗೊಂಡಿದೆ. ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ನೈರುತ್ಯ ಚೀನಾದ ಯುನಾನ್ ಪ್ರಾಂತ್ಯದ ರಾಜಧಾನಿ ಕುನ್‌ಮಿಂಗ್‌ನಿಂದ ಗುವಾಂಗ್‌ಡಾಂಗ್ ಪ್ರಾಂತ್ಯದ ರಾಜಧಾನಿ ಗುವಾಂಗ್‌ಝೌಗೆ ಈ ವಿಮಾನವು ಸಂಚರಿಸುತ್ತಿತ್ತು.ವಿಮಾನವು ಆರು ವರ್ಷ ಹಳೆಯದಾಗಿತ್ತು. ಪತನಕ್ಕೆ ಮೊದಲು ಇದು 29,100 ಅಡಿ ಎತ್ತರದಲ್ಲಿ ಹಾರಾಡುತ್ತಿತ್ತು. ಎರಡು ನಿಮಿಷದಲ್ಲಿ ಅದು 9,075 ಅಡಿಗೆ ಕುಸಿಯಿತು. ಮತ್ತೆ 20 ಸೆಕೆಂಡ್‌ಗಳಲ್ಲಿ 3,225 ಅಡಿಗೆ ಇಳಿಯಿತು. ವಿಮಾನವು ಲಂಬವಾಗಿ ನೆಲಕ್ಕೆ ಅಪ್ಪಳಿಸಿತು ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.