ಕ್ವಾಲಾಲಂಪುರ: ಏಷ್ಯಾ ರಾಷ್ಟ್ರಗಳೊಂದಿಗೆ ಅಮೆರಿಕ ವಿವಿಧ ಕ್ಷೇತ್ರಗಳಲ್ಲಿ ಮಾಡಿಕೊಳ್ಳುತ್ತಿರುವ ಒಪ್ಪಂದಗಳ ಮೂಲಕ ಈ ಪ್ರದೇಶಕ್ಕೆ ಭಾರಿ ಬೆದರಿಕೆವೊಡ್ಡುತ್ತಿದೆ ಎಂದು ಚೀನಾ ಮಂಗಳವಾರ ಹೇಳಿದೆ.

ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಪ್ರವಾಸ ಕೈಗೊಂಡಿರುವ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ, ಮಲೇಷ್ಯಾದ ಕ್ವಾಲಾಲಂಪುರದಲ್ಲಿ ಮಾತನಾಡಿದರು.

‘ಇಂಡೋ–ಪೆಸಿಫಿಕ್ ನ್ಯಾಟೊ ಕೂಟವೊಂದನ್ನು ಸ್ಥಾಪಿಸಲು ಅಮೆರಿಕ ಹವಣಿಸುತ್ತಿದೆ. ಆ ಮೂಲಕ ಈ ಭಾಗದ ರಾಷ್ಟ್ರಗಳ ನಡುವೆ ಸಂಘರ್ಷ ಏರ್ಪಡುವಂತೆ ಮಾಡುವುದು, ಭೌಗೋಳಿಕ ಮತ್ತು ರಾಜಕೀಯ ವಿಷಯದಲ್ಲಿ ಪರಸ್ಪರರಲ್ಲಿ ಭಿನ್ನಾಭಿಪ್ರಾಯ ಮೂಡಿಸಲು ಯತ್ನಿಸುತ್ತಿದೆ’ ಎಂದು ಮಲೇಷ್ಯಾದ ವಿದೇಶಾಂಗ ಸಚಿವ ಹಿಷಮ್ಮುದ್ದೀನ್ ಹುಸೇನ್ ಅವರೊಂದಿಗೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಅಮೆರಿಕ ಕಾರ್ಯರೂಪಕ್ಕೆ ತರಲು ಉದ್ದೇಶಿಸಿರುವ ಕಾರ್ಯತಂತ್ರವೇ ಈ ಭಾಗದ ಭದ್ರತೆಗೆ ಭಾರಿ ಬೆದರಿಕೆವೊಡ್ಡಲಿದೆ. ಅಮೆರಿಕದ ಈ ನಡೆ ಶೀತಲ ಸಮರದ ದಿನಗಳನ್ನು ನೆನಪಿಸುವುದು’ ಎಂದರು.

‘ದಕ್ಷಿಣ ಚೀನಾ ಸಮುದ್ರದ ವಿದ್ಯಮಾನಗಳಲ್ಲಿ ಹಸ್ತಕ್ಷೇಪ ಮಾಡಲು ಯತ್ನಿಸುವ ಬಾಹ್ಯ ಶಕ್ತಿಗಳನ್ನು ಹೊರಹಾಕಿ’ ಎಂದೂ ಹೇಳಿದರು.

‘ದಕ್ಷಿಣ ಚೀನಾ ಸಮುದ್ರಕ್ಕೆ ಸಂಬಂಧಿಸಿದಂತೆ ಉದ್ಭವಿಸಿರುವ ವಿವಾದವನ್ನು ಶಾಂತಿಯುತವಾಗಿ, ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು‘ ಎಂದು ಹಿಷಮ್ಮುದ್ದೀನ್ ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.