ವಾಷಿಂಗ್ಟನ್: ಅಣ್ವಸ್ತ್ರ ದಾಳಿಯನ್ನು ಸಮರ್ಥವಾಗಿ ಎದುರಿಸಲು ಚೀನಾ ತನ್ನ ಹೊಸ ಪರಮಾಣು ಕ್ಷಿಪಣಿಗಳನ್ನು ನೆಲದಾಳದಿಂದ ಉಡಾಯಿಸುವ ಸಾಮರ್ಥ್ಯ ಹೆಚ್ಚಿಸಿಕೊಳ್ಳುವತ್ತ ವೇಗವಾಗಿ ಹೆಜ್ಜೆ ಹಾಕುತ್ತಿದೆ ಎಂದು ಇತ್ತೀಚೆಗೆ ಚೀನಾದ ಕ್ಷಿಪಣಿ ತರಬೇತಿ ಪ್ರದೇಶದಲ್ಲಿ ನಿರ್ಮಾಣ ಚಟುವಟಿಕೆಗಳ ಉಪಗ್ರಹ ಆಧಾರಿತ ಫೋಟೊಗಳನ್ನು ವಿಶ್ಲೇಷಿಸಿದ ಅಮೆರಿಕದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದೀರ್ಘ ಕಾಲದಿಂದ ಅಮೆರಿಕ, ರಷ್ಯಾ ಮತ್ತು ಚೀನಾದ ಪರಮಾಣು ಪಡೆಗಳನ್ನು ವೀಕ್ಷಿಸುತ್ತಿರುವ ಹ್ಯಾನ್ಸ್ ಕ್ರಿಸ್ಟೇನ್ಸೆನ್, ‘ಅಮೆರಿಕದಿಂದ ಹೆಚ್ಚಾಗುತ್ತಿರುವ ಅಣ್ವಸ್ತ್ರ ದಾಳಿಯನ್ನು ಎದುರಿಸಲು ಚೀನಾ ಈ ಸಿದ್ಧತೆ ನಡೆಸುತ್ತಿರುವುದನ್ನು ಈ ಚಿತ್ರಗಳು ಸೂಚಿಸುತ್ತವೆ‘ ಎಂದು ಹೇಳಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಅಮೆರಿಕ, ಹೊಸದಾಗಿ ಅಣ್ವಸ್ತ್ರಗಾರವನ್ನು ನಿರ್ಮಿಸಲು ಮುಂದಿನ ಎರಡು ದಶಕಗಳಲ್ಲಿ ನೂರಾರು ಶತಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡುವುದಕ್ಕೆ ಪ್ರತಿಯಾಗಿ ಚೀನಾ ಅಣ್ವಸ್ತ್ರ ಆಧುನೀಕರಣಕ್ಕೆ ಮುಂದಾಗಿರಬಹುದು ಎಂದು ಹೇಳಲಾಗಿದೆ.

ಸದ್ಯ ಅಮೆರಿಕ ಮತ್ತು ಚೀನಾ ನಡುವೆ ಅಣ್ವಸ್ತ್ರ ಹೊರತುಪಡಿಸಿ, ಸಶಸ್ತ್ರ ಸಂಘರ್ಷದತ್ತ ಸಾಗುವ ಯಾವುದೇ ಸೂಚನೆಯಿಲ್ಲ. ಆದರೆ ಕ್ರಿಸ್ಟೇನ್ಸೆನ್ ವರದಿ ಪ್ರಕಾರ ‘ವ್ಯಾಪಾರದಿಂದ ರಾಷ್ಟ್ರೀಯ ಭದ್ರತೆಯವರೆಗೆ ಅಮೆರಿಕ ಮತ್ತು ಚೀನಾ ನಡುವೆ ಉದ್ವಿಗ್ನತೆಯನ್ನು ಹೆಚ್ಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.