ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈವಾನ್‌ ದ್ವೀಪಗಳ ಸುತ್ತ ಚೀನಾ ಕರಾವಳಿ ಪಡೆಯ ಗಸ್ತು

Published 28 ಫೆಬ್ರುವರಿ 2024, 14:21 IST
Last Updated 28 ಫೆಬ್ರುವರಿ 2024, 14:21 IST
ಅಕ್ಷರ ಗಾತ್ರ

ಬೀಜಿಂಗ್‌: ತೈವಾನ್‌ ದ್ವೀಪಗಳ ಸುತ್ತ ಚೀನಾದ ಕರಾವಳಿ ಪಡೆಗಳು ಗಸ್ತು ತಿರುಗುತ್ತಿವೆ ಎಂದು ತಿಳಿಸಿರುವ ಚೀನಾ ಸರ್ಕಾರವು, ತೈವಾನ್‌ ಪ್ರವಾಸಿಗರ ದೋಣಿಗೆ ಚೀನಾದಿಂದ ಭೀತಿಯುಂಟಾಗಿದೆ ಎಂಬ ಆರೋಪವನ್ನು ತಳ್ಳಿ ಹಾಕಿದೆ.

‘ತೈವಾನ್‌ ಪ್ರವಾಸಿಗರ ದೋಣಿಯನ್ನು ಚೀನಾ ಕರಾವಳಿ ಪಡೆ ವಶಕ್ಕೆ ಪಡೆದಿದೆ. ಇದು ಭೀತಿ ಉಂಟುಮಾಡಿದೆ’ ಎಂದು ತೈವಾನ್‌ ಕಳೆದ ವಾರ ಆರೋಪಿಸಿತ್ತು. ಈ ವಾರ ಚೀನಾದ 5 ಹಡಗುಗಳು ನಿಷೇಧಿತ ಪ್ರದೇಶವನ್ನು ಪ್ರವೇಶಿಸಿವೆ.

ತೈವಾನ್‌ ಆರೋಪಕ್ಕೆ ಪ್ರತಿಕ್ರಿಯಿಸಿದ ಚೀನಾದ ತೈವಾನ್‌ ವ್ಯವಹಾರಗಳ ಇಲಾಖೆಯ ವಕ್ತಾರ ಝು ಫೆಂಗ್ಲಿಯನ್‌, ‘ಮೀನುಗಾರರು ಸಮುದ್ರದ ಗಡಿಯನ್ನು ದಾಟಿಲ್ಲ. ಪ್ರವಾಸಿಗರ ದೋಣಿಯು ತಂಗಿರುವ ಬಗ್ಗೆ ಕರಾವಳಿ ಪಡೆಯಿಂದ ಯಾವುದೇ ಮಾಹಿತಿ ಬಂದಿಲ್ಲ’ ಎಂದು ತಿಳಿಸಿದರು.

‘ಭಯಪಡುವ ಯಾವುದೇ ಸಂಗತಿಗಳಿಲ್ಲ. ಪ್ರವಾಸಿಗರ, ಮೀನುಗಾರರ ಮತ್ತು ಸಾಮಾನ್ಯ ಜನರ ಸುರಕ್ಷತೆ ದೃಷ್ಟಿಯಿಂದ ಸಮುದ್ರ ವ್ಯಾಪ್ತಿಯಲ್ಲಿ ಕರಾವಳಿ ಪಡೆಯು ಕರ್ತವ್ಯವನ್ನು ನಿರ್ವಹಿಸುತ್ತಿದೆ’ ಎಂದು ತಿಳಿಸಿದರು. 

ಚೀನಾದ ಕರಾವಳಿ ಪಡೆಯು ಈ ತಿಂಗಳ ಆರಂಭದಲ್ಲಿ ತೈವಾನ್‌ ನಿಯಂತ್ರಣದಲ್ಲಿರುವ ಕಿನ್‌ಮೆನ್‌ ದ್ವೀಪದ ಸುತ್ತ ಗಸ್ತು ತಿರುಗಲು ಪ್ರಾರಂಭಿಸಿತ್ತು. ಈ ನಡುವೆ ನಿಷೇಧಿತ ಪ್ರದೇಶವನ್ನು ಪ್ರವೇಶಿಸಿ ತೈವಾನ್‌ ಕರಾವಳಿ ಪಡೆಗಳಿಂದ ತಪ್ಪಿಸಿಕೊ‌ಳ್ಳಲು ಯತ್ನಿಸಿದ ಚೀನಾದ ಇಬ್ಬರು ಸಾವನ್ನಪ್ಪಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT