ಬೀಜಿಂಗ್: ಲಡಾಖ್‌ನ ಪೂರ್ವಭಾಗದ ಗಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ನಡೆದ ಸೇನಾ ಸಂಘರ್ಷಕ್ಕೆ ಸಂಬಂಧಿಸಿ ಭಾರತದ ವಿರುದ್ಧ ಚೀನಾ ಪ್ರತಿಭಟನೆ ವ್ಯಕ್ತಪಡಿಸಿದೆ.

ಗಡಿ ಸಂಘರ್ಷದ ಕುರಿತು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯನ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಗಡಿಯಲ್ಲಿ ಚೀನಾ ಸೇನಾಪಡೆಯೊಂದಿಗೆ ಸಂಘರ್ಷ: ಸೇನಾ ಅಧಿಕಾರಿ ಸೇರಿ ಮೂವರು ಹುತಾತ್ಮ

ಗಡಿಯಲ್ಲಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಚೀನಾ–ಭಾರತದ ರಾಜತಾಂತ್ರಿಕರು ಮತ್ತು ಸೇನಾ ಕಮಾಂಡರ್‌ಗಳ ಮಟ್ಟದ ಮಾತುಕತೆ ಜೂನ್ 6ರಂದು ನಡೆದಿತ್ತು. ಆ ವೇಳೆ ಉಭಯ ರಾಷ್ಟ್ರಗಳು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಒಮ್ಮತಕ್ಕೆ ಬಂದಿದ್ದವು. ಆದರೆ ಸೋಮವಾರ ರಾತ್ರಿ ದಾಳಿ ಮಾಡುವ ಮೂಲಕ ಭಾರತೀಯ ಸೇನೆಯು ಆ ಮಾತುಕತೆಯ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಝಾವೊ ಲಿಜಿಯನ್ ಹೇಳಿದ್ದಾಗಿ ಚೀನಾ ಮಧ್ಯಮ ‘ಗ್ಲೋಬಲ್ ಟೈಮ್ಸ್’ ವರದಿ ಮಾಡಿದೆ.

ನಾವು ಭಾರತಕ್ಕೆ ಪ್ರತಿಭಟನೆ ಸಲ್ಲಿಸಿದ್ದೇವೆ. ಉಭಯ ರಾಷ್ಟ್ರಗಳ ನಡುವೆ ಮಾತುಕತೆ ವೇಳೆ ಮೂಡಿದ್ದ ಒಮ್ಮತಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂದು ಸೂಚಿಸಿದ್ದೇವೆ. ಗಡಿ ದಾಟಬಾರದು ಹಾಗೂ ಪರಿಸ್ಥಿತಿ ವಿಷಮಗೊಳಿಸುವ ಯಾವುದೇ ಹೆಜ್ಜೆ ಇಡಬಾರದೆಂದು ತಿಳಿಸಿದ್ದೇವೆ ಎಂದು ಲಿಜಿಯನ್ ಹೇಳಿದ್ದಾರೆ.

ಇನ್ನಷ್ಟು...

ಭಾರತ–ಚೀನಾ ಉದ್ವಿಗ್ನ: ಪರಿಸ್ಥಿತಿ ತಿಳಿಗೊಳಿಸಲು ಮೇಜರ್ ಜನರಲ್ ಮಟ್ಟದ ಮಾತುಕತೆ

'ಎರಡೂ ಕಡೆ ಸಾವುನೋವು ಸಂಭವಿಸಿದೆ': ಭಾರತೀಯ ಸೇನೆ ಮತ್ತೊಂದು ಹೇಳಿಕೆ

ಭಾರತೀಯ ಸೇನೆಯೇ ಮೊದಲು ದಾಳಿ ನಡೆಸಿದೆ: ಚೀನಾ ಆರೋಪ

ಗಡಿಯಲ್ಲಿ ಚಕಮಕಿ: ಚೀನಾ ಯೋಧರೂ ಮೃತಪಟ್ಟಿದ್ದಾರೆಂದ ಗ್ಲೋಬಲ್ ಟೈಮ್ಸ್ ಸಂಪಾದಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.