ಬೀಜಿಂಗ್: ವಿಮಾನಗಳಲ್ಲಿ ಕೋವಿಡ್ -19 ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿಚೀನಾದ ನಾಗರಿಕ ವಿಮಾನಯಾನವು ಐದು ಅಂತರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದೆ

ಈ ಕುರಿತು ಚೀನಾದ ರಾಷ್ಟ್ರೀಯ ಸುದ್ದಿ ವಾಹಿನಿಯೊಂದು ಶುಕ್ರವಾರ ವರದಿ ಮಾಡಿದೆ.

ಅ. 1ರಂದು ಫ್ರಾಂಕ್‌ಫರ್ಟ್‌ನಿಂದ ಚೀನಾದ ಚಾಂಗ್‌ಚುನ್‌ಗೆ ಬಂದ ಏರ್ ಚೀನಾ ವಿಮಾನದ ಪ್ರಯಾಣಿಕರ ಪೈಕಿ ಆರು ಮಂದಿಗೆ ಕೋವಿಡ್ ಇರುವುದು ಗೊತ್ತಾಗಿತ್ತು. ಇದರ ಜೊತೆಗೆ ಇನ್ನೂ ಹಲವು ವಿಮಾನಗಳಲ್ಲಿಯೂ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ ಎಂದು ಸರ್ಕಾರ ಹೇಳಿದೆ.

ಕೊರೊನಾ ಸೋಂಕಿತರು ಪತ್ತೆಯಾದ ವಿಮಾನಗಳನ್ನು ನಿರ್ಬಂಧಿಸುವ ತೀರ್ಮಾನವನ್ನು ಪ್ರಾಧಿಕಾರವು ಅ. 15ರಂದೇ ತೆಗೆದುಕೊಂಡಿದೆ ಎಂದು ವರದಿಯಾಗಿದೆ.

ಚೀನಾದ ಕೆಲವು ಭಾಗಗಳಲ್ಲಿ ಕೋವಿಡ್ ಉಲ್ಬಣಿಸಿದೆ. ಅದನ್ನು ತಡೆಯಲು ಲಾಕ್ ಡೌನ್ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶಾಲೆಗಳನ್ನೂ ಮುಚ್ಚಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.