ಬೀಜಿಂಗ್: ಚೀನಾದ ನೈಋತ್ಯ ಸಿಚುವಾನ್ ಪ್ರಾಂತ್ಯದಲ್ಲಿ ಮುಂದಿನ ವರ್ಷ ಆರಂಭದಿಂದ ಸಾರ್ವಜನಿಕರಿಗೆ ಲಸಿಕೆ ನೀಡಿಕೆ ಕಾರ್ಯಕ್ರಮ ಆರಂಭಿಸಲಾಗುವುದು ಎಂದು ಅಲ್ಲಿನ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಲಸಿಕೆಗೆ ಇನ್ನೂ ಅಧಿಕೃತ ಅನುಮೋದನೆ ದೊರೆತಿಲ್ಲ.

ಚೀನಾದಲ್ಲಿ ಐದು ಕೋವಿಡ್–19 ಲಸಿಕೆಗಳ ಅಭಿವೃದ್ಧಿ ಅಂತಿಮ ಹಂತದಲ್ಲಿದೆ. ಆದರೆ, ಯಾವುದಕ್ಕೂ ಅಧಿಕೃತ ಅನುಮೋದನೆ ಇನ್ನೂ ದೊರೆತಿಲ್ಲ. ಅಂತಿಮ ಹಂತದ ಪ್ರಯೋಗದ ಫಲಿತಾಂಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಹೊಸ ವರ್ಷದ ರಜೆಯ ಬಳಿಕ ಫೆಬ್ರುವರಿಯಲ್ಲಿ ಸಿಚುವಾನ್‌ನಲ್ಲಿ ಸಾರ್ವಜನಿಕರಿಗೆ ಲಸಿಕೆ ನೀಡಲಾಗುವುದು ಎಂದು ಪ್ರಾಂತೀಯ ಆರೋಗ್ಯಾಧಿಕಾರಿಯೊಬ್ಬರು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ:ಕೋವಿಡ್–19 ಲಸಿಕೆ: ಮೊದಲ ಹಂತದ ಕಾರ್ಯಕ್ರಮಕ್ಕೆ ಭಾರತಕ್ಕೆ ಬೇಕು 180 ಕೋಟಿ ಡಾಲರ್

ಗುರುವಾರದ ವೇಳೆಗೆ ಪ್ರಾಂತ್ಯಕ್ಕೆ ಲಸಿಕೆಯ 1,18,000 ಡೋಸ್‌ಗಳನ್ನು ತರಿಸಲಾಗಿದೆ. ಹೆಚ್ಚು ಅಪಾಯ ಎದುರಿಸುತ್ತಿರುವವರಿಗೆ ಫೆಬ್ರುವರಿ 5ರ ಒಳಗೆ ಲಸಿಕೆ ನೀಡಲಾಗುವುದು. ನಂತರ ಉಳಿದ ಸಾರ್ವಜನಿಕರಿಗೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ಪ್ರಾಂತ್ಯಕ್ಕೆ ತರಲಾಗಿರುವುದು ಯಾರು ಅಭಿವೃದ್ಧಿಪಡಿಸಿದ ಲಸಿಕೆ ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.

ಸಾರ್ವಜನಿಕರಿಗೆ ಲಸಿಕೆ ಹಾಕಿಸುವ ನಿಟ್ಟಿನಲ್ಲಿ ಸಮಯ ನಿಗದಿಪಡಿಸಿರುವ ಮೊದಲ ಪ್ರಾಂತ್ಯವಾಗಿದೆ ಸಿಚುವಾನ್. ಚೀನಾದಲ್ಲಿ ಮೊದಲು ಕಾಣಿಸಿಕೊಂಡಿದ್ದ ಕೊರೊನಾ ವೈರಸ್ ಸೋಂಕು ಈಗ ನಿಯಂತ್ರಣಕ್ಕೆ ಬಂದಿದೆ. ಸಿಚುವಾನ್‌ನಲ್ಲಿ ಇತ್ತೀಚಿನ ವಾರಗಳಲ್ಲಿ ಕಡಿಮೆ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಶುಕ್ರವಾರ ಒಂದು ಹೊಸ ಪ್ರಕರಣ ದೃಢಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.