ಬೀಜಿಂಗ್ (ಎಎಫ್‌ಪಿ): ಚೀನಾದ ಕಮ್ಯುನಿಸ್ಟ್ ಪಾರ್ಟಿಯು ಅಕ್ಟೋಬರ್ 16ರಿಂದ ಆರಂಭವಾಗುವ ಪ್ರಮುಖ ರಾಜಕೀಯ ಸಭೆಯಲ್ಲಿ (ಕಾಂಗ್ರೆಸ್) ಪಾಲ್ಗೊಳ್ಳುವ ಎಲ್ಲ ಪ್ರತಿನಿಧಿಗಳನ್ನು ಆಯ್ಕೆ ಮಾಡಿದೆ. ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.

ಪಕ್ಷದ ನೀತಿ ನಿರೂಪಣೆಯ ಶಕ್ತಿಶಾಲಿಯಾದ25 ಸದಸ್ಯರ ಪಾಲಿಟ್‌ಬ್ಯೂರೊ 5 ವರ್ಷಕ್ಕೊಮ್ಮೆ ಈ ಮಹತ್ವದ ಸಭೆ ಸೇರುತ್ತದೆ.

‘ದೇಶದಾದ್ಯಂತ ಪ್ರತಿ ಚುನಾವಣಾ ಘಟಕವು ಪಕ್ಷದ ಕಾಂಗ್ರೆಸ್ ಅಥವಾ ಪಕ್ಷದ ಪ್ರತಿನಿಧಿ ಸಭೆ ಕರೆದು, ಪಕ್ಷದ20ನೇ ಸಮಾವೇಶಕ್ಕೆ 2,296 ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗಿದೆ.ಪ್ರತಿನಿಧಿಗಳಲ್ಲಿಮಹಿಳೆಯರು, ಅಲ್ಪಸಂಖ್ಯಾತ ಪಕ್ಷದ ಸದಸ್ಯರು ಮತ್ತು ಅರ್ಥಶಾಸ್ತ್ರ, ವಿಜ್ಞಾನ ಮತ್ತು ಕ್ರೀಡೆಯಂತಹ ವಿವಿಧ ಕ್ಷೇತ್ರಗಳ ಪರಿಣತರು ಇದ್ದಾರೆ. ಇವರುಪಕ್ಷದ ಸಂವಿಧಾನದ ಜೊತೆಗೆ ಷಿ ಜಿನ್‌ಪಿಂಗ್ ಅವರ ರಾಜಕೀಯ ಸಿದ್ಧಾಂತವನ್ನೂ ಪಾಲಿಸಬೇಕು’ ಎಂದು ಚೀನಾ ಸರ್ಕಾರದ ಅಧಿಕೃತ ಸುದ್ದಿವಾಹಿನಿ ಸಿಸಿಟಿವಿ ತಿಳಿಸಿದೆ.

ದೇಶದಲ್ಲಿ ಉದ್ಭವಿಸಿರುವ ಹದಗೆಟ್ಟಆರ್ಥಿಕತೆ, ಅಮೆರಿಕದೊಂದಿಗೆ ಹಳಸಿದ ಸಂಬಂಧ, ಕಠಿಣ ಕೋವಿಡ್ ನೀತಿಗಳಂತಹ ವಿಚಾರಗಳು ರಾಜಕೀಯವಾಗಿಯೂಷಿ ಜಿನ್‌ಪಿಂಗ್ ಅವರಿಗೆ ತಲೆನೋವಾಗಿ ಪರಿಣಮಿಸುವಾಗಲೇರಾಜಧಾನಿ ಬೀಜಿಂಗ್‌ನಲ್ಲಿ ಪಕ್ಷದ ಸಮಾವೇಶ ಆಯೋಜನೆಗೊಂಡಿದೆ.

ಮಾವೋ ಅವರಂತೆ ಮತ್ತೊಬ್ಬ ಸರ್ವಾಧಿಕಾರಿ ಹುಟ್ಟಿಕೊಳ್ಳುವುದನ್ನು ತಡೆಯುವ ಸಲುವಾಗಿ ಮಾಜಿ ನಾಯಕ ಡೆಂಗ್ ಷಿಯೊಪಿಂಗ್ ಅವರು1980ರ ದಶಕದಲ್ಲಿ ಅಧ್ಯಕ್ಷರಾಗುವುದನ್ನು ಎರಡು ಅವಧಿಗೆ ಮಿತಿಗೊಳಿಸಿ, ನಿಯಮ ಜಾರಿಗೊಳಿಸಿದ್ದರು. ಆದರೆ, ಹಾಲಿ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು 2018ರಲ್ಲಿಈ ನಿಯಮ ರದ್ದುಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.