ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯುದ್ಧ ನಿಲ್ಲಿಸಲು ವಿಶ್ವ ಶಕ್ತಿಗಳಿಗೆ ಚೀನಾ ಅಧ್ಯಕ್ಷರ ಕರೆ

Published 8 ಜುಲೈ 2024, 13:47 IST
Last Updated 8 ಜುಲೈ 2024, 13:47 IST
ಅಕ್ಷರ ಗಾತ್ರ

ಬೀಜಿಂಗ್‌: ಹಂಗೇರಿಯ ಪ್ರಧಾನಿ ವಿಕ್ಟರ್‌ ಓರ್ಬನ್‌ ಅವರೊಂದಿಗೆ ಸೋಮವಾರ ನಡೆದ ಸಭೆಯಲ್ಲಿ, ರಷ್ಯಾ ಮತ್ತು ಉಕ್ರೇನ್‌ ಮುಖಾಮುಖಿ ಮಾತುಕತೆಗೆ ಬರುವಂತೆ ಸಹಾಯ ಮಾಡಬೇಕೆಂದು ಚೀನಾದ ಅಧ್ಯಕ್ಷ ಕ್ಸಿ ಜಿಂಗ್‌ಪಿಂಗ್ ವಿಶ್ವ ಶಕ್ತಿಗಳಿಗೆ ಕರೆ ನೀಡಿದ್ದಾರೆ.

ಉಕ್ರೇನ್‌ನಲ್ಲಿ ಶಾಂತಿ ಸ್ಥಾಪಿಸುವ ಸಲುವಾಗಿ ಕಳೆದ ವಾರ ರಷ್ಯಾ ಮತ್ತು ಉಕ್ರೇನ್‌ಗೆ ವಿಕ್ಟರ್‌ ಭೇಟಿ ನೀಡಿದ್ದರು. ಅದೇ ವಿಷಯವಾಗಿ ಚರ್ಚಿಸಲು ಚೀನಾಕ್ಕೆ ಅನಿರೀಕ್ಷಿತ ಭೇಟಿ ನೀಡಿದರು.

ಉಕ್ರೇನ್‌ ಮತ್ತು ರಷ್ಯಾದಲ್ಲಿ ಶಾಂತಿ ಸ್ಥಾಪಿಸಲು ಚೀನಾದ ರಚನಾತ್ಮಕವಾದ ಉಪಕ್ರಮಗಳನ್ನು ಹೊಗಳಿದ ಅವರು, ಜಾಗತಿಕ ಪ್ರಕ್ಷುಬ್ಧ ಪರಿಸ್ಥಿತಿಯನ್ನು ಸ್ಥಿರಗೊಳಿಸುವ ಶಕ್ತಿ ಬೀಜಿಂಗ್‌ಗೆ ಇದೆ ಎಂದು ಹೊಗಳಿದರು ಎಂದು ಚೀನಾದ ವಾಹಿನಿ ಸಿಸಿಟಿವಿ ತಿಳಿಸಿದೆ. 

ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧದ ಅಂತ್ಯವು ‘ಮೂರು ವಿಶ್ವ ಶಕ್ತಿಗಳಾದ ಅಮೆರಿಕ, ಯುರೋಪಿಯನ್‌ ಒಕ್ಕೂಟ ಮತ್ತು ಚೀನಾದ ನಿರ್ಧಾರವನ್ನು ಅವಲಂಬಿಸಿದೆ’ ಎಂದು ವಿಕ್ಟರ್‌ ಓರ್ಬನ್‌ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿ, ಕ್ಸಿ ಅವರ ಜೊತೆ ಕೈಕುಲುಕುವ ಚಿತ್ರವನ್ನೂ ಲಗತ್ತಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT