ವಾಷಿಂಗ್ಟನ್: ಕೋವಿಡ್ ವಿರುದ್ಧದ ಹೋರಾಟದಲ್ಲಿ ಜಗತ್ತಿನ ವಿವಿಧ ರಾಷ್ಟ್ರಗಳು ಮಗ್ನವಾಗಿರುವ ಪರಿಸ್ಥಿತಿಯ ಲಾಭ ಪಡೆಯಲು ಚೀನಾ ವಿವಿಧ ತಂತ್ರಗಳ ಮೊರೆ ಹೋಗುತ್ತಿದೆ ಎಂದು ಅಮೆರಿಕದ ಹಿರಿಯ ರಾಜತಾಂತ್ರಿಕ ಡೇವಿಡ್ ಸ್ಟಿಲ್‌ವೆಲ್ ಹೇಳಿದ್ದಾರೆ.

ಭಾರತದ ಗಡಿಯಲ್ಲಿ ನಡೆಯುತ್ತಿರುವ ಸಂಘರ್ಷ ಕೂಡ ಚೀನಾ ಅನುಸರಿಸರಿಸುತ್ತಿರುವ ತಂತ್ರದ ಭಾಗವೇ ಆಗಿದೆ ಎಂದು ಅವರು ಸುದ್ದಿಗಾರರಿಗೆ ಇಲ್ಲಿ ಹೇಳಿದರು.

‘ಭಾರತ ಮತ್ತು ಚೀನಾದ ನಡುವೆ ಉದ್ಭವಿಸಿರುವ ಉದ್ವಿಗ್ನ ಸ್ಥಿತಿ, ಗಾಲ್ವನ್ ಕಣಿವೆಯಲ್ಲಿ ಇತ್ತೀಚೆಗೆ ನಡೆದ ಸಂಘರ್ಷದಲ್ಲಿ ಭಾರತದ 20 ಜನ ಯೋಧರು ಹುತಾತ್ಮರಾಗಿರುವುದು ಸೇರಿದಂತೆ ಎಲ್ಲ ಬೆಳವಣಿಗೆಗಳನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಗಮನಿಸುತ್ತಿದೆ’ ಎಂದು ಪೂರ್ವ ಏಷ್ಯಾ ಮತ್ತು ಪೆಸಿಫಿಕ್ ಪ‍್ರದೇಶದ ವ್ಯವಹಾರಗಳ ಸಹಾಯಕ ಕಾರ್ಯದರ್ಶಿಯೂ ಆಗಿರುವ ಸ್ಟಿಲ್‌ವೆಲ್ ಹೇಳಿದರು.

‘ವಿಶ್ವವೇ ಈಗ ಕೊರೊನಾ ಸೋಂಕಿನ ವಿರುದ್ಧ ಹೋರಾಡುವಲ್ಲಿ ತಲ್ಲೀನವಾಗಿದೆ. ಇಂಥ ಪರಿಸ್ಥಿತಿಯ ಲಾಭ ಪಡೆಯಬೇಕು ಎಂಬುದೇ ಚೀನಾ ಲೆಕ್ಕಾಚಾರ. ನನ್ನ ಈ ವಿಶ್ಲೇಷಣೆ ಅಮೆರಿಕ ಸರ್ಕಾರದ ಅಧಿಕೃತ ನಿಲುವು ಎಂದು ಭಾವಿಸಬೇಡಿ. ಚೀನಾದ ಇಂಥ ತಂತ್ರದ ಬಗ್ಗೆ ಎಲ್ಲೆಡೆ ಇಂಥ ಚರ್ಚೆ ನಡೆಯುತ್ತಿದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.