ವಾಷಿಂಗ್ಟನ್: ಪಾಕಿಸ್ತಾನ ಸಹಿತ ನೆರೆಹೊರೆಯ ರಾಷ್ಟ್ರಗಳಿಗೆ ಚೀನಾ ನೀಡಿರುವ ಸಾಲದ ಬಗ್ಗೆ ಅಮೆರಿಕ ತೀವ್ರ ಕಳವಳ ವ್ಯಕ್ತಪಡಿಸಿದೆ. ಇದು ಸಾಲ ನೀಡಿದ ರಾಷ್ಟ್ರಗಳನ್ನು ಬಲವಂತವಾಗಿ ಹತೋಟಿಯಲ್ಲಿ ಇಟ್ಟುಕೊಳ್ಳುವ ಪ್ರಯತ್ನ ಎಂದು ಅದು ಹೇಳಿದೆ.

‘ಭಾರತದ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಶ್ರೀಲಂಕಾ ಹಾಗೂ ನೇಪಾಳಕ್ಕೆ ಚೀನಾ ನೀಡಿರುವ ಸಾಲ ತೀವ್ರ ಕಳವಳಕಾರಿಯಾಗಿದ್ದು, ಇದನ್ನು ಬಲವಂತದ ಹತೋಟಿಗೆ ಬಳಕೆ ಮಾಡುವ ಸಾಧ್ಯತೆ ಇದೆ‘ ಎಂದು ದಕ್ಷಿಣ ಹಾಗೂ ಮಧ್ಯ ಏಷ್ಯಾಗೆ ಸಹ ಕಾರ್ಯದರ್ಶಿಯಾಗಿರುವ ಡೊನಾಲ್ಡ್ ಲು ಹೇಳಿದ್ದಾರೆ.

ಈ ದೇಶಗಳು ತಮ್ಮದೇ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಹಾಗೂ ಹೊರಗಿನ ಯಾವುದೇ ಪಾಲುದಾರರ ಬಲವಂತಕ್ಕೆ ಒಳಗಾಗದೇ ಇರಲು ನಾವು ಅವರೊಂದಿಗೆ ಮಾತುಕತೆ ನಡೆಸುತ್ತೇವೆ ಎಂದು ಅವರು ಹೇಳಿದ್ದಾರೆ.

‘ಹೇಗೆ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಬೇಕು. ಹಾಗೂ ಇತರ ಪಾಲುದಾರರ ಬಲವಂತಕ್ಕೆ ಒಳಗಾಗದೇ ಇರಲು ಅವರಿಗೆ ಸಹಾಯ ಮಾಡುವ ಬಗ್ಗೆ ನಾವು ಭಾರತದೊಂದಿಗೆ ಮಾತುಕತೆ ನಡೆಸುತ್ತೇವೆ‘ ಎಂದು ಅವರು ಹೇಳಿದ್ದಾರೆ.

ಮಾರ್ಚ್ 1 ರಿಂದ 3ರ ವರೆಗೆ ಲು ಅವರು ಭಾರತ ಪ್ರವಾಸದಲ್ಲಿ ಇರಲಿದ್ದಾರೆ.

‘ಚೀನಾ ಸಂಬಂಧ ಭಾರತದೊಂದಿಗೆ ಈಗಾಗಲೇ ಗಂಭೀರ ಚರ್ಚೆಗಳು ನಡೆದಿದ್ದು, ಇದು ಮುಂದುವರಿಯುವ ವಿಶ್ವಾಸ ಇದೆ‘ ಎಂದು ಲು ನುಡಿದಿದ್ದಾರೆ.

ಭೀಕರ ಆರ್ಥಿಕ ಹಿಂಜರಿತಕ್ಕೆ ತುತ್ತಾಗಿರುವ ಪಾಕಿಸ್ತಾನಕ್ಕೆ, ನೆರವು ನೀಡಲು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ನಿರಾಕರಿಸಿದರೂ, 700 ಮಿಲಿಯನ್ ಡಾಲರ್ ಮೊತ್ತದ ಸಹಾಯ ಮಾಡಲು ಚೀನಾ ಮುಂದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.