ಬೀಜಿಂಗ್: ಜಗತ್ತಿನಾದ್ಯಂತ ಭೀತಿ ಹರಡುತ್ತಿರುವ ಕೋವಿಡ್-19 ಸೋಂಕಿನಿಂದಾಗಿ ಚೀನಾದಲ್ಲಿ ಶನಿವಾರ ಮತ್ತೆ 27 ಜನರು ಮೃತಪಟ್ಟಿದ್ದು, ಈ ಮೂಲಕ ಮೃತರ ಸಂಖ್ಯೆಯು 3,097ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಆರೋಗ್ಯ ಆಯೋಗದ ಪ್ರಕಾರ, ಇದುವರೆಗೂ 1,660 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು ಚೇತರಿಸಿಕೊಂಡ ವ್ಯಕ್ತಿಗಳ ಸಂಖ್ಯೆ 57,065ಕ್ಕೆ ಏರಿಕೆಯಾಗಿದೆ ಎಂದು ಸ್ಪುಟ್ನಿಕ್ ವರದಿ ಮಾಡಿದೆ.

ಚೀನಾದಲ್ಲಿ 80,695 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿರುವ 20,500 ಜನರಲ್ಲಿ 5,260ಕ್ಕೂ ಹೆಚ್ಚು ಜನರು ಗಂಭೀರ ಸ್ಥಿತಿಯಲ್ಲಿದ್ದಾರೆ.

ಇದನ್ನೂ ಓದಿ:ಮಹಿಳಾ ವೈದ್ಯಕೀಯ ಸಿಬ್ಬಂದಿಗೆ ಸ್ಯಾನಿಟರಿ ನ್ಯಾಪ್ಕಿನ್ ಕೊರತೆ

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವದಾದ್ಯಂತ 101,927 ಕೊರೊನಾ ವೈರಸ್ ಸೋಂಕು ಪೀಡಿತ ಪ್ರಕರಣಗಳು ಪತ್ತೆಯಾಗಿವೆ. ಚೀನಾದ ಹೊರಗೆ 413 ಜನರು ಕೋವಿಡ್-19ಗೆ ಬಲಿಯಾಗಿದ್ದಾರೆ. ಇದೀಗ 90ಕ್ಕೂ ಅಧಿಕ ದೇಶಗಳಲ್ಲಿ ಕೋವಿಡ್-19ಸೋಂಕು ಆವರಿಸಿಕೊಂಡಿದೆ.

ಅಮೆರಿಕದಲ್ಲಿ ಮತ್ತೆರಡು ಬಲಿ

ವಾಷಿಂಗ್‌ಟನ್ ರಾಜ್ಯದಲ್ಲಿ ಕೋವಿಡ್-19ನಿಂದಾಗಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಈ ಮೂಲಕ ಅಮೆರಿಕದಲ್ಲಿ ಮೃತರ ಸಂಖ್ಯೆಯು 19ಕ್ಕೆ ಏರಿಕೆಯಾಗಿದೆ. ಈ ಮಧ್ಯೆ ನ್ಯೂಯಾರ್ಕ್‌ನಲ್ಲಿ ಸೋಂಕು ಪೀಡಿತರ ಸಂಖ್ಯೆಯು 89ಕ್ಕೆ ಏರಿಕೆಯಾಗಿದೆ ಮತ್ತು ಸೋಂಕಿತ ಪ್ರಯಾಣಿಕರಿರುವ ಕ್ರೂಸ್ ಹಡಗು ಸ್ಯಾನ್‌ಫ್ರಾನ್ಸಿಸ್ಕೋದ ಹೊರಗೆ ಸಿಲುಕಿದೆ.

ಉಸಿರಾಟದ ತೊಂದರೆಗೆ ಕಾರಣವಾಗುವ ಮಾರಕ ಕೋವಿಡ್-19 ಪ್ರಕರಣಗಳು ಅಮೆರಿಕದ ಅರ್ಧಕ್ಕಿಂತಲೂ ಹೆಚ್ಚು ರಾಜ್ಯಗಳಲ್ಲಿ ವರದಿಯಾಗಿದೆ.

ಇನ್ನಷ್ಟು:

ಕೋವಿಡ್ ಸೋಂಕಿತರಿದ್ದ ಕಟ್ಟಡ ಕುಸಿತ

ಇರಾನ್: ಸಂಸದ ಸೇರಿ 21 ಸಾವು

ಚೀನಾದಲ್ಲಿ ಕೊರೊನಾ ಅಟ್ಟಹಾಸ: 3070ಕ್ಕೆ ಏರಿದ ಸಾವಿನ ಸಂಖ್ಯೆ

ಕೋವಿಡ್–19: ಇಟಲಿಯಲ್ಲಿ ಮೃತರ ಸಂಖ್ಯೆ 148ಕ್ಕೆ ಏರಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.