ಹನೋಯಿ (ವಿಯೆಟ್ನಾಂ): ‘ಯಾಗಿ’ ಚಂಡಮಾರುತದಿಂದ ವಿಯೆಟ್ನಾಂ ದೇಶದ ಹಲವೆಡೆ ಭಾರಿ ಮಳೆಯಾಗುತ್ತಿದೆ. ಭೂಕುಸಿತ ಹಾಗೂ ಪ್ರವಾಹದಲ್ಲಿ ಸಿಲುಕಿ ಇದುವರೆಗೆ ಮೃತಪಟ್ಟವರ ಸಂಖ್ಯೆ 87ಕ್ಕೆ ಏರಿದೆ. 70 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸರ್ಕಾರದ ಪ್ರಕಟಣೆ ಮಂಗಳವಾರ ತಿಳಿಸಿದೆ.
ಭಾನುವಾರದಿಂದಲೂ ಭಾರಿ ಮಳೆಯಾಗುತ್ತಿದ್ದು, ಅನೇಕ ಕಡೆಗಳಲ್ಲಿ ಭೂಕುಸಿತ ಉಂಟಾಗಿದೆ. ವಿಯೆಟ್ನಾಂ ಸರ್ಕಾರದ ಅಧಿಕೃತ ವಾಹಿನಿ ‘ವಿಟಿವಿ’ ಕೂಡ ಮಳೆಯ ಪರಿಣಾಮದಿಂದ ಉಂಟಾದ ಅವಘಡಗಳಲ್ಲಿ 87 ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ಮಾಡಿದೆ.