ಬೆಂಗಳೂರು: ಅಮೆರಿಕ ಚುನಾವಣೆಯ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿ ಹಾಗೂ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಶನಿವಾರ ಅಮೆರಿಕದಲ್ಲಿ ಗುಂಡಿನ ದಾಳಿ ನಡೆದಿದ್ದು ಅವರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಟ್ರಂಪ್ ಅವರನ್ನು ಸಾಯಿಸುವ ಉದ್ದೇಶದಿಂದಲೇ ದಾಳಿಯಾಗಿದೆ ಎಂದು ವರದಿಗಳು ತಿಳಿಸಿವೆ.

ಪೆನ್ಸುಲ್ವೆನಿಯಾದ ಬೇಥಲ್ ಪಾರ್ಕ್ ನಿವಾಸಿ 20 ವರ್ಷದ ಯುವಕ ಥಾಮಸ್ ಮ್ಯಾಥೂಸ್ ಕ್ರೂಕ್ ಗುಂಡಿನ ದಾಳಿ ನಡೆಸಿದ ವ್ಯಕ್ತಿ. ಆತನನ್ನು ಸಿಕ್ರೇಟ್ ಸರ್ವಿಸ್ ಪೊಲೀಸ್ ಹತ್ಯೆ ಮಾಡಿದ್ದಾರೆ ಎಂದು ಎಫ್ಬಿಐ ಹೇಳಿಕೆ ಉಲ್ಲೇಖಿಸಿ ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಆದರೆ ಎಫ್ಬಿಐ ಸಾರ್ವಜನಿಕವಾಗಿ ಹೇಳಿಕೆ ಬಿಡುಗಡೆ ಮಾಡಿಲ್ಲ.

ಇದೇ ರೀತಿ ಈ ಹಿಂದೆಯೂ ಅಮೆರಿಕದ ಅಧ್ಯಕ್ಷರಾಗಿದ್ದಾಗ ಹಾಗೂ ಅವರು ಮಾಜಿಯಾದಾಗ ಗುಂಡಿನ ದಾಳಿಗಳು ನಡೆದಿದ್ದವು. ಒಟ್ಟು 10 ಜನರ ಮೇಲೆ ದಾಳಿಯಾಗಿದೆ. ಅದರಲ್ಲಿ 8 ಜನರು ಬದುಕುಳಿದಿದ್ದರೆ ಅಬ್ರಾಹಂ ಲಿಂಕನ್ ಹಾಗೂ ಜಾನ್ ಎಫ್ ಕೆನಡಿ ಅವರು ಹತ್ಯೆಯಾಗಿದ್ದರು.

1– 1835 ಜನವರಿ 30 ರಂದು ಅಧ್ಯಕ್ಷರಾಗಿದ್ದ ಆ್ಯಂಡ್ರೂ ಜಾಕ್ಸನ್ ಅವರ ಮೇಲೆ ಗುಂಡಿನ ದಾಳಿಯಾಗಿತ್ತು.

2– 1912 ರ ಅಕ್ಟೋಬರ್ 14 ರಂದು ಮಾಜಿ ಅಧ್ಯಕ್ಷರಾಗಿದ್ದ ಥಿಯೋಡರ್ ರೂಸ್ವೆಲ್ಟ್ ಅವರ ಮೇಲೆ ಅವರ ಸಲೂನ್ ಸಹಾಯಕ ಹತ್ತಿರದಿಂದ ಗುಂಡಿನ ದಾಳಿ ಮಾಡಿದ್ದ.

3– 1933 ರಲ್ಲಿ ಅಧ್ಯಕ್ಷರಾಗಿದ್ದ ಫ್ರಾಂಕ್ಲಿನ್ ರೂಸ್ವೆಲ್ಟ್ ಅವರ ಮೇಲೆ ಚುನಾವಣಾ ಪ್ರಚಾರದಲ್ಲಿ ಮಿಯಾಮಿಯಲ್ಲಿ ಗುಂಡಿನ ದಾಳಿ ನಡೆದಿತ್ತು.

4–1950 ರಲ್ಲಿ ಫ್ರಾಂಕ್ಲಿನ್ ರೂಸ್ವೆಲ್ಟ್ ತರುವಾಯ ಅಧ್ಯಕ್ಷರಾಗಿದ್ದ ಹ್ಯಾರಿ ಟ್ರೂಮನ್ ಅವರ ಮೇಲೆ ವೈಟ್ ಹೌಸ್ನಲ್ಲಿ ಗುಂಡಿನ ದಾಳಿ ನಡೆದಿತ್ತು.

5– ಅಧ್ಯಕ್ಷರಾಗಿದ್ದ ಜಾರ್ಜ್ ವಾಲೇಸ್ ಮೇಲೆ 1972 ರಲ್ಲಿ ಗುಂಡಿನ ದಾಳಿ ನಡೆದಿತ್ತು.

6– 1975 ರಲ್ಲಿ ಅಧ್ಯಕ್ಷರಾಗಿದ್ದ ಗೆರ್ನಾಲ್ಡ್ ಪೋರ್ಡ್ ಮೇಲೆ ಗುಂಡಿನ ದಾಳಿ ನಡೆದಿತ್ತು.

7– 1981 ರಲ್ಲಿ ಅಧ್ಯಕ್ಷರಾಗಿದ್ದ ರೋನಾಲ್ಡ್ ರೇಗನ್ ಅವರ ಮೇಲೆ ಭಾಷಣ ಮಾಡುವಾಗ ಗುಂಡಿನ ದಾಳಿ ನಡೆದಿತ್ತು.

8– 2011ರಲ್ಲಿ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಅವರನ್ನು ಸಾಯಿಸುವ ಉದ್ದೇಶದಿಂದ ವೈಟ್ ಹೌಸ್ ಮೇಲೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ಮಾಡಿದ್ದ.

*1865 ಏಪ್ರಿಲ್ 15 ರಂದು ಅಂದಿನ ಅಧ್ಯಕ್ಷರಾಗಿದ್ದ ಅಬ್ರಾಂ ಲಿಂಕನ್ ಅವರ ಮೇಲೆ ಹತ್ತಿರದಿಂದ ಗುಂಡಿನ ದಾಳಿ ನಡೆದಿದ್ದರಿಂದ ಅವರು ಅಧಿಕಾರದಲ್ಲಿರುವಾಗಲೇ ಮೃತಪಟ್ಟಿದ್ದರು.

* ಅಮೆರಿಕ ಅಧ್ಯಕ್ಷರಾಗಿದ್ದ ಜಾನ್ ಎಫ್ ಕೆನಡಿ ಅವರನ್ನು 1963 ನವೆಂಬರ್ 22ರಂದು ಅವರು ಡಲ್ಲಾಸ್ನಲ್ಲಿ ರಾಜಕೀಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ಗುಂಡು ಹಾರಿಸಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ನೌಕಾಸೇನೆಯ ಹಿರಿಯ ಅಧಿಕಾರಿಯೊಬ್ಬ ಈ ಗುಂಡಿನ ದಾಳಿ ನಡೆಸಿದ್ದ.

ಇಲ್ಲಿವರೆಗೆ ಒಟ್ಟು 46 ಜನ ಅಮೆರಿಕ ಅಧ್ಯಕ್ಷರಾಗಿದ್ದಾರೆ.
.ಟ್ರಂಪ್ ‘ಕಠಿಣ’ ವ್ಯಕ್ತಿ; ಅಮೆರಿಕದ ಅಧ್ಯಕ್ಷರೆಂದು ಅನುಮೋದಿಸುತ್ತೇನೆ: ಮಸ್ಕ್.ಗುಂಡಿನ ದಾಳಿ; ಡೊನಾಲ್ಡ್ ಟ್ರಂಪ್ ಆಸ್ಪತ್ರೆಯಿಂದ ಬಿಡುಗಡೆ: FBIನಿಂದ ತನಿಖೆ ಆರಂಭ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.