ಮೂಡುಬಿದಿರೆ: ರೋಚಕ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್ ಮೂಲಕ ಕಣಚೂರು ಎಎಚ್‌ಎಚ್ ಸಂಸ್ಥೆಯ ವಿರುದ್ಧ ಜಯ ಗಳಿಸಿದ ಆತಿಥೇಯ ಆಳ್ವಾಸ್ ಫಿಸಿಯೊಥೆರಪಿ ಕಾಲೇಜು ತಂಡ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮೈಸೂರು ವಲಯ ಫುಟ್‌ಬಾಲ್ ಟೂರ್ನಿಯ ಪುರುಷರ ವಿಭಾಗದ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಅರಮನೆ ಮೈದಾನದಲ್ಲಿ ಶುಕ್ರವಾರ ಸಂಜೆ ನಡೆದ ಫೈನಲ್ ಪಂದ್ಯದಲ್ಲಿ 5–3ರಲ್ಲಿ ಆಳ್ವಾಸ್ ಕಾಲೇಜು ಜಯ ಸಾಧಿಸಿತು.
ಸೆಮಿಫೈನಲ್‌ನಲ್ಲಿ ಎಸ್‌ಸಿಎಸ್ ನರ್ಸಿಂಗ್ ಕಾಲೇಜು ವಿರುದ್ಧ 2–1ರಲ್ಲಿ ಗೆದ್ದ ಆಳ್ವಾಸ್ ಮತ್ತು ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಎದುರು 2–0ಯಿಂದ ಗೆದ್ದ ಕಣಚೂರು ಕಾಲೇಜು ತಂಡಗಳ ನಡುವಿನ ಪ್ರಶಸ್ತಿ ಸುತ್ತಿನ ಹಣಾಹಣಿ ಜಿದ್ದಾಜಿದ್ದಿಯ ಕಾದಾಟಕ್ಕೆ ಸಾಕ್ಷಿಯಾಯಿತು. ನಿಗದಿತ ಅವಧಿಯಲ್ಲಿ ಎರಡೂ ತಂಡಗಳಿಗೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಫಲಿತಾಂಶ ನಿರ್ಣಯಿಸಲು ಪೆನಾಲ್ಟಿ ಶೂಟೌಟ್ ಮೊರೆಹೋಗಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.