ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸಿದ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರು, ಶ್ವೇತಭವನ ಪ್ರವೇಶಕ್ಕೂ ಮೊದಲು ತಮ್ಮ ಎಂದಿನ ಕೇಶ ವಿನ್ಯಾಸವನ್ನು ಬದಲಿಸಿ, ಹೊಸ ಲುಕ್ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಫ್ಲೋರಿಡಾದ ಪಾಮ್ ಬೀಚ್ನಲ್ಲಿರುವ ‘ಟ್ರಂಪ್ ಅಂತರರಾಷ್ಟ್ರೀಯ ಗಾಲ್ಫ್ ಕ್ಲಬ್’ನಲ್ಲಿ ಕಂಡು ಬಂದ ಟ್ರಂಪ್ ಅವರು, ಬಿಳಿ ಬಣ್ಣದ ಗಾಲ್ಫ್ ಟಿ–ಶರ್ಟ್, ಕಪ್ಪು ಪ್ಯಾಂಟ್ ಹಾಗೂ ಶೂ ಧರಿಸಿ ಹೊರ ಬರುತ್ತಾರೆ. ತಮ್ಮ ಭೇಟಿಗೆ ಬಂದವರ ಕುಶಲೋಪರಿ ವಿಚಾರಿಸಿದ ಟ್ರಂಪ್ ತಮ್ಮ ಹ್ಯಾಟ್ ತೆಗೆದು, ಹೊಸ ಕೇಶ ವಿನ್ಯಾಸದೊಂದಿಗೆ ಎಲ್ಲರನ್ನೂ ಚಕಿತಗೊಳಿಸಿದರು.

ತಮ್ಮ ಎಂದಿನ ಉದ್ದನೆಯ ಕೆಂಬಣ್ಣದ ಕೂದಲು, ಮುಂದಕ್ಕೆ ಒಂದಷ್ಟು ಚಾಚಿಕೊಂಡು, ಹಿಂದಕ್ಕೆ ಸ್ವಲ್ಪ ಎತ್ತಿಕೊಂಡಿತ್ತು. ಇದು ಅವರದ್ದೇ ಟ್ರೇಡ್ ಮಾರ್ಕ್ ಎಂದೇ ಬಿಂಬಿತವಾಗಿತ್ತು. ಇಷ್ಟು ವರ್ಷಗಳ ಕಾಲ ವ್ಯಂಗ್ಯಚಿತ್ರಕಾರರಿಗೆ, ಅಭಿಮಾನಿಗಳು ಹಾಗೂ ಟೀಕಾಕಾರರಿಗೆ ಸುಲಭವಾಗಿದ್ದ ಟ್ರಂಪ್ ಅವರ ‘ಹ್ಯಾಟ್ ಹೇರ್’ ಕೇಶವಿನ್ಯಾಸ ಈಗ ಇಲ್ಲವಾಗಿದೆ. ಈ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಅವುಗಳಿಗೆ ಹಲವು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ಟ್ರಂಪ್ ಅವರ ನೂತನ ಕೇಶ ವಿನ್ಯಾಸಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಹಲವರು ತಮ್ಮದೇ ಧಾಟಿಯಲ್ಲಿ ವಿಶ್ಲೇಷಿಸಿದ್ದಾರೆ. ‘ಟ್ರಂಪ್ ಅವರ ಕೂದಲಿಗೆ ಏನು ಮಾಡಲಾಗಿದೆ?’ ಎಂದು ಒಬ್ಬರು ಕೇಳಿದರೆ, ‘ಅತ್ಯದ್ಭುತ ಹ್ಯಾಟ್ ಹೇರ್’ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ‘ಚೆನ್ನಾಗಿ ಕಾಣಿಸುತ್ತಿದ್ದೀರಿ ಮಿಸ್ಟರ್ ಪ್ರೆಸಿಡೆಂಟ್’ ಎಂದಿದ್ದಾರೆ.

2016ರಲ್ಲಿ ನೀಲಿ ಚಿತ್ರ ತಾರೆಗೆ ಹಣ ನೀಡಿದ ‘ಹಶ್ ಮನಿ’ ಪ್ರಕರಣದಲ್ಲಿ ವಿನಾಯಿತಿ ಆಧಾರದಲ್ಲಿ ಕ್ಷಮಾಪಣೆ ನೀಡುವ ನಿರ್ಧಾರದ ವಿರುದ್ಧ ನ್ಯೂಯಾರ್ಕ್ ನ್ಯಾಯಾಧೀಶರ ಆದೇಶದಿಂದಾಗಿ ಟ್ರಂಪ್ ಅವರು ತುಸು ಹಿನ್ನಡೆ ಅನುಭವಿಸಿದ್ದರು. ಇದಾದ ಮರು ದಿನವೇ ಟ್ರಂಪ್ ಹೊಸ ಕೇಶ ವಿನ್ಯಾಸದೊಂದಿಗೆ ಗಾಲ್ಫ್ ಕ್ಲಬ್ನಲ್ಲಿ ಕಂಡುಬಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.